ಐಆರ್​ಸಿಟಿಸಿಯಿಂದ ದಿವ್ಯ ದಕ್ಷಿಣ ಯಾತ್ರೆ ಪ್ರವಾಸ: 9 ದಿನದಲ್ಲಿ ಯಾವೆಲ್ಲ ಕ್ಷೇತ್ರಗಳನ್ನು ನೋಡ್ಬಹುದು?

ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಯಾವುದೇ ತೊಂದರೆಯಿಲ್ಲದೆ ಅತ್ಯಂತ ಕಡಿಮೆ ದರದಲ್ಲಿ ಪ್ರವಾಸದ ಪ್ಯಾಕೇಜ್ ತಂದಿದೆ. ಪ್ರವಾಸದ ದಿನಗಳು ಎಷ್ಟು? ಯಾವ ಸ್ಥಳಗಳನ್ನು ನೋಡಬಹುದು ಹಾಗೂ ಪ್ರಯಾಣ ದರ ಎಷ್ಟು? ಹೀಗೆ ವಿವಿಧ ವಿವರಗಳನ್ನು ತಿಳಿಯೋಣ.

ನಿಮಗಾಗಿ IRCTC ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ‘ಜ್ಯೋತಿರ್ಲಿಂಗ ಜೊತೆಗೆ ದಿವ್ಯ ದಕ್ಷಿಣ ಯಾತ್ರಾ’ ಎಂಬ ಪ್ರವಾಸದ ಪ್ಯಾಕೇಜ್​ನ್ನು ಘೋಷಣೆ ಮಾಡಿದೆ. ಈ ಪ್ರವಾಸದ ಒಟ್ಟು ಅವಧಿಯು 8 ರಾತ್ರಿಗಳು ಹಾಗೂ 9 ದಿನಗಳು ಆಗಿರುತ್ತದೆ. ಸಿಕಂದರಾಬಾದ್‌ನಿಂದ ರೈಲು ಮಾರ್ಗವಾಗಿ ಪ್ರಯಾಣ ಆರಂಭವಾಗುತ್ತದೆ.

ಒಂದು ಹಾಗೂ ಎರಡನೇ ದಿನ: ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಸಿಕಂದರಾಬಾದ್‌ನಿಂದ ಮೊದಲ ದಿನ ಮಧ್ಯಾಹ್ನ 12 ಗಂಟೆಗೆ ಹೊರಡಲಿದೆ. ಎರಡನೇ ದಿನ ಆಂಧ್ರಪ್ರದೇಶದ ಭುವನಗಿರಿ, ಜನಗಾಂವ್​, ಕಾಜಿಪೇಟ್, ವಾರಂಗಲ್, ಮಹಬೂಬಾಬಾದ್, ಡೋರ್ನಕಲ್, ಖಮ್ಮಂ, ತೆಲಂಗಾಣದ ಮಧಿರಾ, ವಿಜಯವಾಡ, ತೆನಾಲಿ, ಚೀರಾಲಾ, ಓಂಗೋಲ್, ಕವಲಿ, ನೆಲ್ಲೂರು, ಗುಡೂರು, ರೇಣಿಗುಂಟಾ ಮೂಲಕ ಸಾಗುವ ಮೂಲಕ ಬೆಳಗ್ಗೆ 8ಕ್ಕೆ ತಿರುವಣ್ಣಾಮಲೈ ರೈಲು ನಿಲ್ದಾಣ ತಲುಪಲಿದೆ. ಇಲ್ಲಿಂದ ಹೋಟೆಲ್‌ಗೆ ಹೋಗಿ ಫ್ರೆಶ್‌ ಅಪ್‌ ಆಗುವ ಮೂಲಕ ಅರುಣಾಚಲಂ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು. ಬಳಿಕ ಅರುಣಾಚಲಂ ರೈಲು ನಿಲ್ದಾಣದಿಂದ ಕೂಡಲ್‌ನಗರಕ್ಕೆ ಪ್ರಯಾಣಿಸಲಾಗುವುದು.

3ನೇ ದಿನ : ಮೂರನೇ ದಿನ ಬೆಳಗ್ಗೆ ಕೂಡಲನಗರ ತಲುಪಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ರಾಮೇಶ್ವರಂಗೆ ಹೋಗಿ ಹೋಟೆಲ್​ನಲ್ಲಿ ಚೆಕ್ ಇನ್ ಮಾಡಲಾಗುತ್ತದೆ. ಫ್ರೆಶ್‌ ಅಪ್‌ ಆದ ನಂತರ ಸ್ಥಳೀಯ ದೇವಾಲಯಗಳಿಗೆ ಭೇಟಿ ಇರಲಿದೆ. ಸಂಜೆ ಹೋಟೆಲ್‌ಗೆ ಹಿಂತಿರುಗಿ ರಾತ್ರಿ ಊಟ ಮಾಡಿ ಅಲ್ಲಿಯೇ ಉಳಿಯುವುದು.

4ನೇ ದಿನ : ನಾಲ್ಕನೇ ದಿನದ ಊಟದ ನಂತರ, ರಾಮೇಶ್ವರಂನಿಂದ ಮಧುರೈಗೆ ಬಸ್ ಮೂಲಕ ಹೊರಡಲಾಗವುದು. ಸಂಜೆ ಮೀನಾಕ್ಷಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು ಹಾಗೂ ನಿಮಗೆ ಸಮಯವಿದ್ದರೆ ನೀವು ಶಾಪಿಂಗ್ ಮಾಡಬಹುದು. ಬಳಿಕ ಮಧುರೈನಿಂದ ಕೂಡಲನಗರ ರೈಲು ನಿಲ್ದಾಣ ತಲುಪಲಿದ್ದಾರೆ. ಕನ್ಯಾಕುಮಾರಿಗೆ ರೈಲು ಪ್ರಯಾಣ ಪ್ರಾರಂಭವಾಗಲಿದೆ.

5ನೇ ದಿನ : ಐದನೇ ದಿನ ಬೆಳಗ್ಗೆ ಕನ್ಯಾಕುಮಾರಿ ರೈಲು ನಿಲ್ದಾಣ ತಲುಪುವ ಮೊದಲು ಹೋಟೆಲ್ ಗೆ ಹೋಗಿ ಚೆಕ್ ಇನ್ ಮಾಡಿ ಫ್ರೆಶ್ ಅಪ್ ಆದ ಬಳಿಕ ರಾಕ್ ಮೆಮೋರಿಯಲ್, ಗಾಂಧಿ ಮಂಟಪ, ಸೂರ್ಯಾಸ್ತಕ್ಕೆ ಭೇಟಿ ನೀಡಲಾಗುವುದು. ಮತ್ತೆ ಹೋಟೆಲ್‌ಗೆ ಹಿಂತಿರುಗಿ ಊಟ ಮಾಡಿ ಮತ್ತು ಕನ್ಯಾಕುಮಾರಿಯಲ್ಲಿ ರಾತ್ರಿಯ ತಂಗಬೇಕು.

6ನೇ ದಿನ : ಆರನೇ ದಿನದ ಉಪಹಾರದ ಬಳಿಕ, ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ಹಾಗೂ ಕನ್ಯಾಕುಮಾರಿ ರೈಲು ನಿಲ್ದಾಣವನ್ನು ತಲುಪಲಾಗುವುದು ಹಾಗೂ ಅಲ್ಲಿಂದ ಕುಚುವೇಲಿಗೆ ಹೊರಡಲಾಗುವುದು. ಕುಚುವೇಲಿ ತಲುಪಿದ ನಂತರ ತಿರುವನಂತಪುರವು ರಸ್ತೆಯ ಮೂಲಕ ಆರಂಭವಾಗುತ್ತದೆ. ಅಲ್ಲಿಗೆ ತಲುಪಿದ ನಂತರ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಡಲಾಗುವುದು. ಆ ಬಳಿಕ ಕೊವಲಂ ಬೀಚ್‌ನಲ್ಲಿ ಸ್ವಲ್ಪ ಹೊತ್ತು ಆನಂದಿಸಬಹುದು. ಅಲ್ಲಿಂದ ಕುಚುವೇಲಿ ನಿಲ್ದಾಣ ತಲುಪಿ ಅಲ್ಲಿಂದ ತಿರುಚಿರಾಪಳ್ಳಿಗೆ ತೆರಳಲಾಗುವುದು.

7ನೇ ದಿನ : ಏಳನೇ ದಿನ ಬೆಳಗ್ಗೆ ತಿರುಚಿರಾಪಳ್ಳಿ ತಲುಪಲಾಗುವುದು. ಮತ್ತು ಹೋಟೆಲ್‌ನಲ್ಲಿ ಫ್ರೆಶ್‌ ಅಪ್ ಆದ ಬಳಿಕ, ಶ್ರೀರಂಗಂ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು. ಊಟದ ನಂತರ ತಂಜಾವೂರು ಆರಂಭವಾಗುತ್ತದೆ. ಅಲ್ಲಿ ಬೃಹದೀಶ್ವರ ದೇವಸ್ಥಾನಕ್ಕೆ ಭೇಟಿ ಕೊಡಲಾಗುವುದು. ಬಳಿಕ ತಂಜಾವೂರು ರೈಲು ನಿಲ್ದಾಣ ತಲುಪಿ, ಅಲ್ಲಿಂದ ಸಿಕಂದರಾಬಾದ್‌ಗೆ ತೆರಳಲಾಗುವುದು.

8, 9ನೇ ದಿನ : ರೇಣಿಗುಂಟ, ಗುಡೂರು, ನೆಲ್ಲೂರು, ಕವಲಿ, ಓಂಗೋಲ್, ಚೀರಾಳ, ತೆನಾಲಿ, ವಿಜಯವಾಡ, ಮಧಿರ, ಖಮ್ಮಂ, ಡೋರ್ನಕಲ್, ಮಹೆಬೂಬಾಬಾದ್, ವಾರಂಗಲ್, ಕಾಜಿಪೇಟೆ, ಒಂಬತ್ತನೇ ದಿನ ಜಂಗಮ, ಭುವನಗಿರಿ ಮೂಲಕ ಸಿಕಂದರಾಬಾದ್ ತಲುಪುವ ಮೂಲಕ ಪ್ರವಾಸ ಪೂರ್ಣಗೊಳ್ಳಲಿದೆ.

ಟ್ರಿಪ್‌ ದರ ಹೀಗಿದೆ..

  • ಎಕಾನಮಿ (SL): ವಯಸ್ಕರಿಗೆ ₹14,250, 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ₹13,240
  • ಸ್ಟ್ಯಾಂಡರ್ಡ್ (3AC): ವಯಸ್ಕರಿಗೆ ₹21,880, 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ₹20,700
  • ಕಂಫರ್ಟ್ (2ಎಸಿ): ವಯಸ್ಕರಿಗೆ ₹28,440, 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ₹27,020
- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!