ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಬಿಗ್ಬಾಸ್ ಸೀಸನ್-8 ಮುಗಿದರೂ ಕಂಟೆಸ್ಟೆಂಟ್ಸ್ ಇನ್ನೂ ಮಿಂಚುತ್ತಲೇ ಇದ್ದಾರೆ. ಈ ಲಿಸ್ಟ್ಗೆ ಮೊದಲಿಗೆ ಸೇರೋದು ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್. ಮನೆಯೊಳಗೆ ಇವರಿಬ್ಬರ ಸ್ನೇಹ ಎದ್ದು ಕಾಣುತ್ತಿತ್ತು. ಇದೀಗ ದಿವ್ಯಾ ಮಂಜು ಸಾಂಪ್ರದಾಯಿಕ ಉಡುಪುಗಳಲ್ಲಿ ಇರುವ ಫೋಟೊ ವೈರಲ್ ಆಗಿದೆ. ಇದು ಯಾವ ಫಂಕ್ಷನ್ದು ಎಂದು ಜನ ಕುತೂಹಲ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ದಿವ್ಯಾ ಸುರೇಶ್ ಫ್ಯಾಮಿಲಿ ಜೊತೆ ಮಂಜು ಇರುವ ಫೋಟೊ ಕೂಡ ವೈರಲ್ ಆಗಿದೆ.
ಮಂಜು ದಿವ್ಯಾ ಮನೆಗೆ ಹೋಗಿದ್ರಾ? ಅಥವಾ ದಿವ್ಯಾ ಮಂಜು ಮನೆಗೆ ಬಂದಿದ್ರಾ ಅಂತ ಜನ ತಲೆಕೆಡಿಸಿಕೊಳ್ತಾ ಇದ್ದಾರೆ.
ಆದರೆ ಇದ್ಯಾವುದೂ ನಿಜ ಅಲ್ಲ, ಈ ಫೋಟೊ ಕಲರ್ಸ್ ಕನ್ನಡ ವಾಹಿನಿಯ ಗಣೇಶೋತ್ಸವ ಕಾರ್ಯಕ್ರಮದಲ್ಲಿ ತೆಗೆದುಕೊಂಡಿದ್ದು. ದಿವ್ಯಾ ಡ್ಯಾನ್ಸ್ ಹಾಗೂ ಮಂಜು ಕಾಮಿಡಿ ಈ ಕಾರ್ಯಕ್ರಮದ ಹೈಲೈಟ್ ಆಗಿದೆ. ಬಿಗ್ಬಾಸ್ ಶೋಗೋಸ್ಕರ ಸ್ನೇಹ ಬೆಳೆಸಿದ್ದಾರೆ ಎಂದು ಮಾತಾಡೋ ಮಂದಿಗೆ ದಿವ್ಯಾ ಮಂಜು ನಾವು ಹಾಗಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ನಮ್ಮಲ್ಲಿ ಅದೇ ಬಾಂಧವ್ಯ ಇದೆ, ಯಾವಾಗಲೂ ಇರುತ್ತದೆ ಎಂದು ದಿವ್ಯಾ-ಮಂಜು ಹೇಳಿದ್ದಾರೆ.