ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಈ ಬಾರಿ ಬಿಗ್ಬಾಸ್ನಲ್ಲಿ ಟ್ವಿಸ್ಟ್ ಆಂಡ್ ಟರ್ನ್ಸ್ಗೆ ಯಾವ ಕಡಿಮೆ ಇಲ್ಲ.
ದೊಡ್ಮನೆ ಕಂಟೆಸ್ಟೆಂಟ್ ದಿವ್ಯಾ ಉರುಡುಗ ಅವರಿಗೆ ಅನಾರೋಗ್ಯ ಕಾಡುತ್ತಿದೆ. ಕೆಲ ದಿನಗಳಿಂದ ಅವರು ಟಾಸ್ಕ್ನಲ್ಲಿ ಕೂಡ ಕಾಣಿಸಿಕೊಳ್ಳುತ್ತಿಲ್ಲ.
ಮೊನ್ನೆಯಷ್ಟೇ ಕಿಚ್ಚ ಸುದೀಪ್ ವಾಯ್ಸ್ನೋಟ್ನಲ್ಲಿ ‘ದಿವ್ಯಾ ಆರೋಗ್ಯದ ಕಡೆ ಗಮನಕೊಡಿ’ ಎಂದು ಹೇಳಿದ್ರು. ಇದೀಗ ದಿವ್ಯಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯೂರಿನರಿ ಇನ್ಫೆಕ್ಷನ್ ಇರುವುದರಿಂದ ದಿವ್ಯಾರನ್ನು ಆಸ್ಪತ್ರೆಗೆ ಸೇರಿಸಿದ್ದು, ದಿವ್ಯಾ ಉರುಡುಗ ಅವರ ಬಟ್ಟೆಯನ್ನು ಕೂಡ ಸ್ಟೋರ್ರೂಂನಲ್ಲಿ ಇಡಿ ಎಂದು ಬಿಗ್ಬಾಸ್ ಹೇಳಿದ್ದಾರೆ. ಈ ವಾಯ್ಸ್ ಬಂದ ಕೂಡಲೇ ಸ್ಪರ್ಧಿಗಳು ದಿವ್ಯಾ ಮನೆಗೆ ಹೋದ್ರು ಎಂದು ಅಳುತ್ತಿದ್ದಾರೆ. ಅವರೀಗ ಮತ್ತೆ ವಾಪಸಾಗಬೇಕಾದರೂ ಕೊರೋನಾ ಕಾರಣದಿಂದ ಕ್ವಾರೆಂಟೀನ್ ಮುಗಿಸಿ ಒಳಬರಬೇಕಿದೆ. ಮುಂದೇನಾಗುತ್ತದೋ ಕಾದುನೋಡಬೇಕಿದೆ.