ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೀರಿಯಲ್ ಬಳಿಕ ಬಿಗ್ ಬಾಸ್ ಮೂಲಕ ಎಲ್ಲರ ಮನಗೆದ್ದ ದಿವ್ಯಾ ಉರುಡುಗ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಬಳಿಕ ಇನ್ ಸ್ಟಾಗ್ರಾಂ ನಲ್ಲಿ ತುಂಬಾ ಆಕ್ಟಿವ್ ಇರುವ ದಿವ್ಯಾಗೆ ಈಗ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಆಫರ್ ಬಂದಿದೆ.
ಹರಿಪ್ರಸಾರ್ ಜಯಣ್ಣ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪದವಿ ಪೂರ್ವ ಚಿತ್ರದಲ್ಲಿ ದಿವ್ಯಾ ಉರುಡುಗ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೆಸ್ಟ್ ರೋಲ್ ಆದರೂ ಇದು ಪ್ರಮುಖ ಪಾತ್ರವಾಗಿದೆ. ದಿವ್ಯಾ ಅವರಿಂದಲೇ ಸಿನಿಮಾ ಕ್ಲೈಮ್ಯಾಕ್ಸ್ ತಲುಪಲಿದೆ ಎಂಬ ಮಾಹಿತಿ ತಿಳಿದಿದೆ.
ದಿವ್ಯಾ ಅವರ ಪಾತ್ರದ ಶೂಟಿಂಗ್’ಗಳು ಶೀಘ್ರದಲ್ಲಿ ಪ್ರಾರಂಭವಾಗಲಿದ್ದು, ಬೆಂಗಳೂರು-ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.