ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………….
ಹೊಸದಿಗಂತ ಆನ್ ಲೈನ್ ಡೆಸ್ಕ್:
ಬೆಡ್ ದಂಧೆ ಹಗರಣ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶುಭಾಶಯ ಹೇಳಿದ್ದಾರೆ. ಜೊತೆಗೆ ಬಿಬಿಎಂಪಿ ಯಾರ ಕಂಟ್ರೋಲ್ ನಲ್ಲಿದೆ ಅಂತಲೂ ಪ್ರಶ್ನಿಸಿದ್ದಾರೆ.
ಟ್ವೀಟ್ ಮಾಡುವ ಮೂಲಕ ಶುಭಾಶಯ ಹೇಳಿರುವ ಡಿಕೆ ಶಿವಕುಮಾರ್ , ತಮ್ಮದೇ ಸರ್ಕಾರ ಹಾಗೂ ಪಾಲಿಕೆಯಲ್ಲಿ ನಡೆದಿರೋ ಬೆಡ್ ಹಂಚಿಕೆ ಹಗರಣ ಬಯಲಿಗೆಳೆದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ ಹಾಗೂ ಉದಯ ಗರುಡಾಚಾರ್ ಅವರಿಗೆ ಅಭಿನಂದನೆ.
ಬಿಬಿಎಂಪಿ ಯಾರ ಕಂಟ್ರೋಲ್ ನಲ್ಲಿದೆ? ಜನರು ಇಷ್ಟೊಂದು ಸಂಕಷ್ಟ ಅನುಭವಿಸಲು ಕಾರಣಕರ್ತರಾದ ಸಚಿವರನ್ನು ಸರ್ಕಾರ ಕೂಡಲೇ ಹೊಣೆಗಾರರನ್ನಾಗಿಸಲಿ ಎಂದು ಡಿ ಕೆ ಶಿವಕುಮಾರ್ ಒತ್ತಾಯ ಮಾಡಿದ್ದಾರೆ.