ಪೆನ್‌ಡ್ರೈವ್‌ ಪ್ರಕರಣದಲ್ಲಿ ಡಿಕೆಶಿ ರಾಜೀನಾಮೆ ಕೊಡ್ಲೇಬೇಕು: ಎಚ್‌ಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪೆನ್ ಡ್ರೈವ್ ಲೀಕ್ ಕೇಸ್ ನ ಆಡಿಯೋ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ರಾಜೀನಾಮೆ ಕೊಡಬೇಕು ಅಂತ ಮಾಜಿ ಸಿಎಂ ಕುಮಾರಸ್ವಾಮಿ  ಒತ್ತಾಯ ಮಾಡಿದ್ದಾರೆ.

ಈಗಾಗಲೇ ನಾವು ಹೇಳಿ ಆಯ್ತು. ಇಷ್ಟೆಲ್ಲ ಪ್ರಕರಣದಲ್ಲಿ ಭಾಗಿಯಾದ ಮೇಲೂ ಅವರನ್ನು  ಮುಂದುವರಿಸಿರೋದು ಸರಿಯಲ್ಲ. ಈ ಸರ್ಕಾರ ಇಂತಹವರಿಗೆ, ತಪ್ಪಿತಸ್ಥರಿಗೆ ರಕ್ಷಣೆ ಕೊಡ್ತಾ ಇದೆ. ಡಿ.ಕೆ ಶಿವಕುಮಾರ್ ಇದರಲ್ಲಿ ಏನ್ ಮಾಡಿದ್ದಾರೆ ಅನ್ನೋದು ಜಗಜ್ಜಾಹೀರು ಆಗಿದೆ. ಆದರೂ ಡಿ.ಕೆ ಶಿವಕುಮಾರ್ ರನ್ನ ರಕ್ಷಣೆ ಮಾಡೋ ಕೆಲಸ ಮಾಡ್ತಿದ್ದಾರೆ.

ಸರ್ಕಾರ ಮುಂದೆ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈ ನೆಲದ ಕಾನೂನಿನಲ್ಲಿ ಯಾರೇ ಇದ್ದರೂ ತಲೆ ಬಾಗಲೇಬೇಕು. ನಿತ್ಯ ಹಣ, ಅಧಿಕಾರ ದುರುಪಯೋಗ ಪಡಿಸಿಕೊಂಡು ಬಹಳ ದಿನ ಉಳಿಯೋದಕ್ಕೆ ಆಗೋದಿಲ್ಲ.ಅದಕ್ಕೂ ಅಂತಿಮ ದಿನಗಳು ಬರುತ್ತವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!