Friday, June 2, 2023

Latest Posts

ಕಲಾವಿದರ ಮೇಲೆ ದುಡ್ಡು ಎಸೆದು ಎಲೆಕ್ಷನ್ ಟೈಮ್ನಲ್ಲಿ ಎಡವಟ್ಟು ಮಾಡ್ಕೊಂಡ ಡಿಕೆಶಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಜಾಧ್ವನಿ ಯಾತ್ರೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಲಾವಿದರ ಮೇಲೆ ದುಡ್ಡು ಎಸೆದು ಎಡವಟ್ಟು ಮಾಡಿಕೊಂಡಿದ್ದಾರೆ.

ಮಂಡ್ಯದ ಬೇವಿನಹಳ್ಳಿ ಗ್ರಾಮದಲ್ಲಿ ಪ್ರಜಾಧ್ವನಿ ಯಾತ್ರೆ ವೇಳೆ ಬಸ್ ಮೇಲೆ ನಿಂತು ಕಲಾವಿದರ ಮೇಲೆ 500 ರೂಪಾಯಿ ನೋಟುಗಳನ್ನು ಎಸೆದಿದ್ದಾರೆ. ಕಲಾವಿದರ ಮೇಲೆ ಹಣ ಎಸೆದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮನುಷ್ಯರ ಮೇಲೆ ಹಣ ಎಸೆಯೋದು ಸರಿಯಲ್ಲ, ಇಲ್ಲಿ ಯಾರೂ ಬೇಡುತ್ತಿಲ್ಲ ಎನ್ನುತ್ತಿದ್ದಾರೆ.

ಹಣ ಹಾಗೇ ಎಸೆದಾಗ ಅದು ಕಲಾವಿದರ ಕೈ ಸೇರಿಲ್ಲ, ಹಾಗಾಗಿ ನೋಟನ್ನು ಮಡಚಿ ಕಲಾವಿದರತ್ತ ತೂರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲೆಕ್ಷನ್ ಟೈಮ್ನಲ್ಲಿ ಹೀಗೆ ಮಾಡಿದ್ಯಾಕೆ ಎಂದು ಜನ ಹೇಳ್ತಿದ್ದಾರೆ!

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!