spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಡಿ.ಕೆ.ಶಿ.ವಿರುದ್ಧ ಸಲೀಮ್ ಹೇಳಿಕೆ’ ತಡವಾಗಿಯಾದರೂ ಕಾಂಗ್ರೆಸ್ ನವರಿಗೆ ಜ್ಞಾನೋದಯ: ಸಚಿವ ಖೂಬಾ

- Advertisement -Nitte

ಹೊಸ ದಿಗಂತ ವರದಿ, ಚಿತ್ರದುರ್ಗ:

ಡಿ.ಕೆ.ಶಿ. ಕಂಡರೆ ಕಾಂಗ್ರೆಸ್‌ನಲ್ಲಿ ಕೆಲವರಿಗೆ ಆಗುವುದಿಲ್ಲ. ಕಾಂಗ್ರೆಸ್ ಮುಖಂಡರಾದ ಉಗ್ರಪ್ಪ ಹಾಗೂ ಸಲೀಂ ಅವರು ಈ ಕುರಿತು ಸತ್ಯ ಬಾಯಿ ಬಿಟ್ಟಿದ್ದಾರೆ. ತಡವಾಗಿಯಾದರೂ ಅವರಿಗೆ ಈಗ ಜ್ಞಾನೋದಯವಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಒಳಜಗಳ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಂಡರೆ ಬೇರೆಯವರಿಗೆ ಆಗಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಡರೆ ಡಿ.ಕೆ. ಶಿವಕುಮಾರ್‌ಗೆ ಆಗುವುದಿಲ್ಲ ಎಂದರು.
2013 ರಿಂದ 18ರವರೆಗೆ ಅಧಿಕಾರಿಗಳು, ಹಿಂದೂ ಕಾರ್ಯಕರ್ತರ ಕೊಲೆ, ರೈತ ಆತ್ಮಹತ್ಯೆ, ಯಾರ ಕಾಲದಲ್ಲಿ ಕೊಲೆ, ಆತ್ಮಹತ್ಯೆ ನಡೆದದ್ದು ಎಂಬುದನ್ನು ಸಿದ್ದರಾಮಯ್ಯ ನೆನಪಿಸಿಕೊಳ್ಳಲಿ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಉತ್ತಮ ಆಡಳಿತ ನೀಡಿಲ್ಲ. ಹಿಂದೂಗಳಿಗೆ ಬೈದರೆ ಮುಸ್ಲೀಮರು ಕಾಂಗ್ರೆಸ್ ಪರ ಇರುತ್ತಾರೆಂಬ ಭ್ರಮೆ ಅವರಲ್ಲಿದೆ. ಸಿದ್ದರಾಮಯ್ಯ ಇಂತಹ ಭ್ರಮೆಯನ್ನು ಬಿಡಬೇಕು ಎಂದು ಹೇಳಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss