ಚಳಿಗಾಲ ಬಂದರೆ ಸಾಕು ತಲೆ ಕೂದಲು ಉದುರುವುದು ದುಪ್ಪಟ್ಟಾಗುತ್ತದೆ. ಬರೀ ತಲೆ ಕೂದಲು ಮಾತ್ರವಲ್ಲ ಐಬ್ರೋ ಕೂದಲು ಸಹ ಉದುರುವುದು ಹೆಚ್ಚುತ್ತದೆ. ಈ ಬಗ್ಗೆ ಕೇರ್ ಮಾಡದೇ ಹಾಗೇ ಬಿಟ್ಟರೆ ನಿಮ್ಮ ಸುಂದರ ಐಬ್ರೊಗಳು ಖಾಲಿ ರಸ್ತೆಯಂತಾಗುತ್ತದೆ. ಐಬ್ರೊ ಉದುರುವುದು ಕಡಿಮೆ ಆಗಿ, ದಟ್ಟವಾಗಿ ಬೆಳೆಯಬೇಕೆಂದರೆ ಇಲ್ಲಿರುವ ಟಿಪ್ಸ್ಗಳನ್ನು ಟ್ರೈ ಮಾಡಿ…
- ವಿಟಮಿನ್ ಇ ಆಯಿಲ್ನ್ನು ನಿತ್ಯ ಕಣ್ಣಿನ ಹುಬ್ಬಿಗೆ ಹಚ್ಚಿಕೊಳ್ಳುವುದರಿಂದ ಹುಬ್ಬು ಚೆನ್ನಾಗಿ ಬೆಳೆಯುತ್ತದೆ ಮತ್ತು ದಪ್ಪದ ಹುಬ್ಬು ನಿಮ್ಮದಾಗುತ್ತದೆ. ಐಬ್ರೋ ಕೂದಲು ಉದರುವುದು ಒಂದೇ ವಾರದಲ್ಲಿ ನಿಲ್ಲುತ್ತದೆ.
- ನಿತ್ಯ ರಾತ್ರಿ ಮಲಗುವಾಗ ಕೊಬ್ಬರಿ ಎಣ್ಣೆಯನ್ನು ಹುಬ್ಬುಗಳಿಗೆ ಹಚ್ಚಿಕೊಂಡು ಹುಬ್ಬನ್ನು 10 ಸರಿ ತಿದ್ದಿಕೊಳ್ಳಿ. ಈ ರೀತಿ ಮಾಡಿದರೆ ಹುಬ್ಬಿನ ಕೂದಲು ಉದುರುವುದು ಕೂಡ ನಿಲ್ಲುತ್ತದೆ ಮತ್ತು ಆಕರ್ಷಕ ಹುಬ್ಬು ನಿಮ್ಮದಾಗುತ್ತದೆ.
- ಲಿಂಬೆಹಣ್ಣಿನ ಸಿಪ್ಪೆಯನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಸೇರಿಸಿಕೊಂಡು ಹುಬ್ಬುಗಳಿಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಂಡರೆ ಐಬ್ರೋ ಕೂದಲು ಉದರುವುದು ನಿಲ್ಲುತ್ತದೆ ಮತ್ತು ದಟ್ಟವಾಗಿ ಹುಬ್ಬು ಬೆಳೆಯುತ್ತದೆ.
- ಲೋಳೆ ರಸವನ್ನು ತೆಗೆದುಕೊಂಡು ಅದನ್ನು ಹುಬ್ಬಿಗೆ ಹಚ್ಚಿಕೊಳ್ಳಬೇಕು. ನಂತರ ಅದು ಒಣಗಲು ಬಿಡಬೇಕು. ನಂತರ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಹೀಗೆ ನಿತ್ಯ ಮಾಡಿದರೆ ಆಕರ್ಷಕ ಹುಬ್ಬು ನಿಮ್ಮದಾಗುತ್ತದೆ ಮತ್ತು ಉದುರುವುದು ಕೂಡ ನಿಲ್ಲುತ್ತದೆ.
- ಹಾಲಿನ ಕೆನೆಯನ್ನು ನಿತ್ಯ ರಾತ್ರಿ ಮಲಗುವ ಮುನ್ನ ಹುಬ್ಬುಗಳಿಗೆ ಹಚ್ಚಿಕೊಂಡರೆ ಹುಬ್ಬು ದಪ್ಪವಾಗುತ್ತದೆ ಮತ್ತು ಉದುರುವುದಿಲ್ಲ.
- ಮೆಂತೆಯನ್ನು ನೀರಿನಲ್ಲಿ ನೆನೆಸಿಟ್ಟು ಅದನ್ನು ಪೇಸ್ಟ್ ಮಾಡಿ ಹಚ್ಚುವುದರಿಂದ ಹುಬ್ಬು ಚೆನ್ನಾಗಿ ಬೆಳೆಯುತ್ತದೆ. ನಿತ್ಯ ಮಾಡಿದರೆ ಆಕರ್ಷಕ ಹುಬ್ಬು ನಿಮ್ಮದಾಗುತ್ತದೆ.