spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇಷ್ಟವೆಂದು ಎಲ್ಲ ಆಹಾರಗಳೊಂದಿಗೂ ಮೊಸರು ಸೇವಿಸುತ್ತಿರಾ? ಆದ್ರೆ ಇನ್ಮುಂದೆ ಈ ತಪ್ಪು ಮಾಡಬೇಡಿ..

- Advertisement -Nitte

ಬಹಳಷ್ಟು ಜನರಿಗೆ ಈ ಗಟ್ಟಿ ಮೊಸರು ತುಂಬಾ ಇಷ್ಟ. ಹಾಗಾಗಿ ಎಲ್ಲ ಆಹಾರಗಳೊಂದಿಗೂ ಮೊಸರು ಇರಲೇ ಬೇಕು. ಆದರೆ ಹೀಗೆ ಎಲ್ಲ ಆಹಾರದೊಂದಿಗೂ ಮೊಸರು ತಿನ್ನುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಂತ ಮೊಸರು ಆರೋಗ್ಯಕ್ಕೆ ಕೆಟ್ಟದ್ದು ಅಂತೇನಲ್ಲ. ಮೊಸರಿನಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚಿಸುವ ಗುಣವಿದೆ. ಆದರೆ ಮೊಸರನ್ನು ಹಾಗೇ ತಿನ್ನುವುದಕ್ಕೂ ಬೇರೆ ಪದಾರ್ಥಗಳೊಂದಿಗೆ ತಿನ್ನುವುದಕ್ಕೂ ಬಹಳ ವ್ಯತ್ಯಾಸವಿದೆ ಯಾವ ಪದಾರ್ಥಗಳೊಂದಿಗೆ ಮೊಸರನ್ನು ಸೇವಿಸುವಂತಿಲ್ಲ ಎಂಬುದು ಇಲ್ಲಿದೆ ನೋಡಿ

  • ಟೀ, ಕಾಫಿ, ಕಷಾಯ:
    ಟೀ, ಕಾಫಿ, ಕಷಾಯ ಕುಡಿದ ತಕ್ಷಣ ಮೊಸರು ಕೂಡ ತಿನ್ನುವಂತಿಲ್ಲ ಅಥವಾ ಮೊಸರಿನಿಂದ ತಯಾರಿಸಿದ ಪದಾರ್ಥ ಕೂಡ ಸೇವಿಸುವಂತಿಲ್ಲ. ಏಕೆಂದರೆ ಟೀನಲ್ಲಿ ಹಾಲಿನ ಅಂಶವಿದ್ದು, ಮೊಸರಿನಲ್ಲಿ ಹುಳಿ ಅಂಶವಿರುವುದರಿಂದ ಇವೆರಡು ಒಟ್ಟಿಗೆ ಸೇವಿಸುವುದು ನಿಷಿದ್ಧ.
  • ಮಾವಿನ ಹಣ್ಣು:
    ತುಂಬಾ ಜನ ಮಾವಿನ ಹಣ್ಣು ಲಸ್ಸಿ ಕುಡಿಯುತ್ತಾರೆ. ಆದರೆ ಇದು ಶುದ್ಧ ತಪ್ಪು. ಏಕೆಂದರೆ ಮಾವಿನ ಹಣ್ಣು ಮತ್ತು ಮೊಸರು ವಿರುದ್ಧ ಪದಾರ್ಥ. ಏಕೆಂದರೆ ಮಾವು ಮತ್ತು ಮೊಸರು ಎರಡು ತಂಪು ಪ್ರವೃತ್ತಿ ಹೊಂದಿದೆ. ಇವೆರಡನ್ನೂ ಒಟ್ಟಿಗೆ ಸೇವಿಸಿದರೆ ಚರ್ಮ ಸಮಸ್ಯೆ ಉಂಟಾಗುತ್ತದೆ ಮತ್ತು ದೇಶದಲ್ಲಿ ಶೀತ ಪ್ರಮಾಣ ಹೆಚ್ಚಾಗಿ ನೆಗಡಿ, ಜ್ವರ ಆಗುವ ಸಾಧ್ಯತೆ ಇರುತ್ತದೆ.
  • ಉದ್ದಿನ ಬೇಳೆ:
    ಉದ್ದಿನ ಬೇಳೆ ಮತ್ತು ಮೊಸರನ್ನು ಒಟ್ಟಿಗೆ ಸೇವಿಸಿದರೆ ಆಯಸಿಡಿಟಿ, ಬೇಧಿ, ವಾಂತಿ ಉಂಟಾಗುವ ಸಾಧ್ಯತೆ ಇರುತ್ತದೆ.
  • ಹಾಲು:
    ಹಾಲಿನಿಂದಲೇ ಮೊಸರನ್ನು ತಯಾರಿಸುವುದಾದರೂ ಹಾಲು ಮತ್ತು ಮೊಸರು ವಿರುದ್ಧ ಆಹಾರಗಳು. ಇದನ್ನು ಒಟ್ಟಿಗೆ ಸೇವಿಸಿದರೆ ಹೊಟ್ಟೆ ಸಂಬಂಧಿ ಆರೋಗ್ಯ ಸಮಸ್ಯೆ ಎದುರಾಗುತ್ತದೆ.
  • ಮೀನು:
    ಮೀನು ಮತ್ತು ಮೊಸರು ಎರಡರಲ್ಲಿಯೂ ಅಧಿಕ ಪ್ರಮಾಣದ ಪ್ರೋಟಿನ್ ಇರುತ್ತದೆ. ಪ್ರೋಟಿನ್‌ಯುಕ್ತ ಎರಡು ಆಹಾರಗಳನ್ನು ಒಟ್ಟಿಗೆ ಸೇವಿಸುವುದು ನಿಷೇಧ.
  • ಐಸ್ ಕ್ರೀಂ:
    ಐಸ್‌ ಕ್ರೀಂ ಹಾಲಿನಿಂದ ತಯಾರಿಸಲಾಗುತ್ತದೆ. ಹಾಲಿಗೂ ಮೊಸರಿಗೂ ಸ್ವಲ್ಪವೂ ಆಗಿಬರುವುದಿಲ್ಲ. ಹಾಲು ಮತ್ತು ಮೊಸರು ವಿರುದ್ಧ ಆಹಾರಗಳು ಹಾಗಾಗಿ ಐಸ್‌ ಕ್ರೀಂ ತಿಂದ ನಂತರವೂ ಮೊಸರನ್ನು ಸೇವಿಸಬೇಡಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss