ಹೊಸದಿಗಂತ ವರದಿ, ಬಳ್ಳಾರಿ:
ಅಖಿಲ ಭಾರತ ವೀರಶೈವ ಮಹಾಸಭಾ ಮಾಡುತ್ತಿರುವುದು ರಾಜಕೀಯವಲ್ಲ, ಅದು ನಮಗೆ ಬೇಡ. ಆದರೇ, ರಾಜಕೀಯದಲ್ಲಿ ಹಾಗೂ ರಾಜಕಾರಣಿಗಳಿಗೆ ಅನ್ಯಾಯವಾದರೇ, ಸುಮ್ಮನೆ ಬಿಡಲ್ಲ, ಹಿಂದೆನೂ ಬಿಟ್ಟಿಲ್ಲ, ಮುಂದೆನೂ ಬಿಡಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಅವರು ಹೇಳಿದರು.
ನಗರದ ಬಸವ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವೀರಶೈವ, ಲಿಂಗಾಯತರು ಬೇರೆ ಎನ್ನುವ ಚೆರ್ಚೆ ಬೇಡ, ಈ ಹಿಂದೆ ಈ ಕುರಿತು ದೊಡ್ಡ ಷಡ್ಯಂತ್ರ ನಡದಿತ್ತು. ಧರ್ಮ ಒಡೆಯುವ ಕೆಲಸ ಮಾಡಬಾರದು, ನಾವೆಲ್ಲರೂ ಒಂದೇ, ನಮ್ಮಲ್ಲಿ 107ಒಳಪಂಗಡಗಳಿವೆ, ಶ್ರೀ ಬಸವೇಶ್ವರ ಅವರ ಕಾಲದಿಂದ ಇಲ್ಲಿವರೆಗೆ ವೀರಶೈವ ಲಿಂಗಾಯತರ ಇತಿಹಾಸವಿದೆ. ನಮ್ಮಲ್ಲಿ ಒಳಪಂಗಡಗಳು ಹೆಚ್ಚಿದ್ದು, ನಮ್ಮ ನಮ್ಮಲ್ಲೇ ಕಿಚ್ಚಾಟ, ದ್ವೇಶ ಮಾಡುವುದು ಬೇಡ, ಇಲ್ಲಿವರೆಗೂ ಅಂತಹ ಘಟನೆಗಳೂ ನಡೆದಿಲ್ಲ, ನಡೆಯೋದು ಬೇಡ, ಸಮುದಾಯದ ಅಭಿವೃದ್ಧಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಒಳ್ಳೆಯ ಕೆಲಸ ಮಾಡುತ್ತಿದೆ. ನಮ್ಮ ಧರ್ಮವನ್ನು ನಾವು ರಕ್ಷಿಸಬೇಕು. ಬೇರೆ ಧರ್ಮದವನ್ನು ಯಾವತ್ತೂ ಕೀಳಾಗಿ ಕಾಣಬಾರದು, ಈ ಹಿಂದೆ ಬೆಂಗಳೂರು ಸೇರಿ ನಾನಾ ಕಡೆ ಕಾರ್ಯಕಾರಣಿ ಸಭೆ ನಡಸಲಾಗುತ್ತಿತ್ತು. 117 ವರ್ಷದ ಬಳಿಕ ಬಳ್ಳಾರಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಕಾರ್ಯಕಾರಣಿ ಸಭೆಯನ್ನು ಅ.30 ಹಾಗೂ 31ರಂದು ಆಯೋಜಿಸಲಾಗಿದೆ. ವಿಶೇಷವಾಗಿ ಇದರಲ್ಲಿ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಅವರ ಆಸಕ್ತಿ, ಶ್ರಮ ಅಡಗಿದೆ. ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮ ನಡಸುವುದು ಸುಲಭದ ಮಾತಲ್ಲ, ಸಭೆಯ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಾಸಭಾದ ರಾಜ್ಯ ಕಾರ್ಯದರ್ಶಿ ಕೆ.ಬಿ.ಶ್ರೀನಿವಾಸ್ ರೆಡ್ಡಿ, ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಗಂಗಾವತಿ ವಿರೇಶ್, ರುದ್ರೇಶ್, ಅಂಗಡಿ ಶಂಕರ್, ಚಂದ್ರು, ಸಣ್ಣ ರಂಗಪ್ಪ, ಹೇಮಾದ್ರಿ ಕುರಗೋಡು, ಹೊನ್ನನಗೌಡ, ಡಾ.ಗಡಗಿ ಚೇತನಾ, ಮೇಟಿ ದಿವಾಕರ್, ಕೋರಿ ವಿರುಪಾಕ್ಷಪ್ಪ ಸೇರಿದಂತೆ ಇತರರಿದ್ದರು.