Thursday, August 18, 2022

Latest Posts

ಅವಸರದಲ್ಲಿ ದೇವಸ್ಥಾನಗಳಿಗೆ ದಕ್ಕೆಯಾಗಬಾರದು: ಸಿಎಂ ಖಡಕ್ ಸೂಚನೆ

ಹೊಸದಿಗಂತ ವರದಿ, ಕಲಬುರಗಿ:

ರಾಜ್ಯದಲ್ಲಿ ಯಾರು ಕೂಡ ಅವಸರದಲ್ಲಿ ದೇವಾಲಯಗಳನ್ನು ತೆಗೆಯಬಾರದು ಮತ್ತು ದಕ್ಕೆ ಮಾಡಬಾರದು. ಈ ವಿಷಯವಾಗಿ ಈಗಾಗಲೇ ಸಂಬಂದಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೆಶನ ನೀಡಿದ್ದೇನೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ನಗರದಲ್ಲಿ ಅನಧಿಕೃತ ದೇವಸ್ಥಾನ ತೆರವಿನ ವಿಚಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೈಸೂರು  ಡಿಸಿ ಮತ್ತು ತಹಶೀಲ್ದಾರಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಈ ವಿಚಾರದ ಬಗ್ಗೆ ಗಂಭೀರ ಚಿಂತನೆ ಮಾಡುತ್ತಿದ್ದೇನೆ. ಕೂಡಲೇ ಪರಿಹಾರ ಕಂಡುಕೊಂಡು, ನಮ್ಮ ಅಸ್ಮಿತೆ ನಮ್ಮ ಧರ್ಮದ ದೇವಾಲಯಗಳನ್ನು ರಕ್ಷಣೆ ಮಾಡಿಕೊಳ್ಳುತ್ತೇವೆ ಎಂದರು.

ರಾಜ್ಯ ಸಭಾ ಸದಸ್ಯ ಸುಬ್ರಮಣ್ಯ ಅವರ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಅವರ ಬಗ್ಗೆ ಎನು ಹೇಳಿಲ್ಲ. ಅವರು ಇಂಡಿಪೆಂಡೆಂಟ್ ಆಗಿ ವಿಚಾರ ಮಾಡುವ ವ್ಯಕ್ತಿಯಾಗಿದ್ದಾರೆ ಎಂದು ಮಾತ್ರ ಹೇಳಿದ್ದೇನೆ ಎಂದರು. ಅವರು  ಟ್ವೀಟ್ ಮಾಡಿರುವುದಕ್ಕೆ ನಾನು ಉತ್ತರ ನೀಡಲು ಹೋಗುವುದಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!