ಒಂದು ಕಾಲದಲ್ಲಿ ಸಿಡಿಗಳೆಂದರೆ ಎಲ್ಲರಿಗೂ ಖುಷಿ. ಹೊಸ ಮ್ಯೂಸಿಕ್ ಆಲ್ಬಂ, ಹೊಸ ಸಿನಿಮಾ ಸಿಡಿಗಳನ್ನು ಮನೆಯವರೆಲ್ಲ ಕುಳಿತು ನೊಡುತ್ತಿದ್ದೆವು. ಆದರೆ ಇದೀಗ ಹಳೆ ಕಾಲದ ಮದುವೆ ಸಿಡಿ ಬಿಟ್ಟರೆ ಇನ್ಯಾವ ವಿಡಿಯೋ ಕೂಡ ಇಲ್ಲ. ಉಳಿದಿರುವ ಹಳೆ ಸಿಡಿಗಳನ್ನು ಈ ರೀತಿ ಬಳಸಬಹುದು.
ಪೇಂಟ್ ಮಾಡಿ
ಹಳೆ ಸಿಡಿಗಳಿಗೆ ಪೇಂಟ್ ಮಾಡಿ. ಫ್ಲವರ್ಸ್, ಕಲರ್ ಕಾಂಬಿನೇಶನ್ಸ್ನಿಂದ ಸಿಡಿಯನ್ನು ಪೇಂಟ್ ಮಾಡಿ, ವಾಲ್ ಮೇಲೆ ಹ್ಯಾಂಗ್ ಮಾಡಬಹುದು.
ಪೆನ್ ರ್ಯಾಕ್
ಸಿಡಿಗಳನ್ನು ಸೈಕಲ್ ರ್ಯಾಲಿ ರೀತಿ ಜೋಡಿಸಿ ಗಮ್ ಹಾಕಿ ಪೆನ್ ಸ್ಟಾಂಡ್ ಮಾಡಬಹುದು. ಅಥವಾ ಶೋ ಪೀಸ್ ರೀತಿಯಲ್ಲೂ ಇಡಬಹುದು.
ಶೋ ಪೀಸ್
ಸಿಡಿಯಲ್ಲಿ ಎಲ್ಲ ಬಣ್ಣಗಳು ಕಾಣುವುದರಿಂದ ಅವುಗಳನ್ನು ನೇತುಹಾಕಿದ್ರೆ ಚೆನ್ನಾಗಿ ಕಾಣುತ್ತದೆ. ಅಥವಾ ಕಟಿಂಗ್ ಮಾಡಿದರೂ ಶೈನಿಂಗ್ ಕಾಣುತ್ತದೆ.
ಡ್ರೆಸ್ ಡಿಸೈನ್
ಅರ್ಧ ಪೇಂಟ್ ಮಾಡಿ ಇನ್ನರ್ಧಕ್ಕೆ ಡ್ರೆಸ್ ರೀತಿ ಸಣ್ಣ, ಸಣ್ಣದಾಗಿ ಕತ್ತರಿಸಿ, ಜೋಡಿಸಿ. ಇದನ್ನು ಕೂಡ ನಿಮ್ಮ ಶೋಕೇಸ್ನಲ್ಲಿ ಇಡಬಹುದು.