ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೂತು ಕೂತು ಬೆನ್ನು ನೋವೇ? ಹಿಂಡಿ ಹಿಪ್ಪೆ ಮಾಡುವ ಈ ನೋವು ಹೋಗಲಾಡಿಸಲು ಹೀಗೆ ಮಾಡಿ…

ಈ ಬೆನ್ನು ನೋವು ಆಫೀಸ್ ವರ್ಕ್ ಮಾಡುವವರಿಗೆ ಸರ್ವೇ ಸಾಮಾನ್ಯ. ದಿನದಲ್ಲಿ 8 ರಿಂದ 10 ತಾಸು ಒಂದೇ ಭಂಗಿಯಲ್ಲಿ ಕುಳಿತು ವರ್ಕ್ ಮಾಡುವುದರಿಂದ ಈ ಬೆನ್ನು ನೋವು ಬರುತ್ತದೆ. ಮೊದಲೆಲ್ಲ  ವಯಸ್ಸಾದವರಿಗೆ ಮಾತ್ರ ಬೆನ್ನು ನೋವು ಇರುತ್ತಿತ್ತು. ಈಗ ವಯಸ್ಸಿನ ಮಿತಿಯಿಲ್ಲದೇ ಬೆನ್ನು ನೋವು ಬರುತ್ತಿದೆ.  ಬೆನ್ನು ನೋವು ಹೋಗಲಾಡಿಸಲು ಈ ರೀತಿ ಮಾಡಿ..

ಯೋಗ:
ಬೆನ್ನು ನೋವು ನಿವಾರಣೆ ಮಾಡುವಂತಹ ಯೋಗಾಸನ ಮಾಡಿ. ಪ್ರತಿ ದಿನ ತಪ್ಪದೇ ಮಾಡಿ. ಬೆನ್ನು ನೋವು ನಿವಾರಣೆಯಾಗುತ್ತದೆ.

ಲಿಂಬು ರಸದ ಮಸಾಜ್:
ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿಕೊಂಡು ಅದಕ್ಕೆ ಲಿಂಬು ರಸ ಹಾಕಿರಿ. ನಂತರ ಅದನ್ನು ಬೆನ್ನಿಗೆ ಸರಿಯಾಗಿ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. ಬೆನ್ನು ನೋವು 15 ದಿನದಲ್ಲಿ ನಿವಾರಣೆಯಾಗುತ್ತದೆ.

ಶಾಕ:
ಗಾಜಿನ ಬಾಟಲಿಯಲ್ಲಿ ಬಿಸಿ ನೀರನ್ನು ತುಂಬಿಕೊಂಡು, ಅದರಿಂದ ಬೆನ್ನಿಗೆ ಶಾಖ ಕೊಟ್ಟುಕೊಳ್ಳಿ. ಹಿತವೆನ್ನಿಸುತ್ತದೆ.

ಮಲಗುವ ಭಂಗಿ:
ಮಲಗುವಾಗ ಹೇಗೆ ಹೇಗೋ ಮಲಗಬೇಡಿ. ಮಲಗುವಾಗ ನಿಮ್ಮ ಪೊಸೀಶನ್ ಚೆನ್ನಾಗಿರಲಿ. ಸರಿಯಾಗಿ ಮಲಗದಿದ್ದರೆ ಬೆನ್ನು ನೋವು ಖಚಿತ. ಮೆತ್ತನೆಯ ದಿಂಬುಗಳನ್ನು ಇಟ್ಟುಕೊಳ್ಳಿ ಆಗ ಆರಾಮದ ನಿದ್ದೆ ನಿಮ್ಮದಾಗಿರುತ್ತದೆ.

ತೂಕ:
ದೇಹದ ತೂಕ ಇಳಿಸಿ. ನಿಮ್ಮ ದೇಹದ ತೂಕ ಇಳಿಸಿದರೆ ಬೆನ್ನು ನೋವು ತಾನಾಗೆ ನಿಲ್ಲುತ್ತದೆ. ಹೆಲ್ತಿಯಾದ ತೂಕ ಮೆಂಟೇನ್ ಮಾಡುವುದರಿಂದ ಎಲ್ಲ ವಿಚಾರಗಳಿಗೂ ಒಳ್ಳೆಯದು.

ಐಸ್ ಹಾಗೂ ಹೀಟ್:
ಬೆನ್ನು ನೋವು ಬಂದರೆ, ಬೆನ್ನು ಮೇಲೆ ಮಾಡಿ ಮಲಗಿ, ಬೆನ್ನಿನ ಮೇಲೆ ಐಸ್ ಪ್ಯಾಕ್ ಅಥವಾ ಹೀಟ್ ಪ್ಯಾಕ್ ಹಾಕಿಕೊಳ್ಳಿ. ಇದರಿಂದ ಸ್ವಲ್ಪ ರಿಲೀಫ್ ಎನಿಸುತ್ತದೆ.

ಮೆಣಸಿನ ಕಾಳು:
ತಡೆಯಲಾಗದಷ್ಟು ಬೆನ್ನು ನೋವು ಇದ್ದಾಗ ಕಾಳು ಮೆಣಸನ್ನು ನೆನೆಸಿಟ್ಟ ಅಕ್ಕಿ ಜೊತೆ ರುಬ್ಬಿಕೊಂಡು, ಬೆನ್ನಿಗೆ ಹಚ್ಚಿಕೊಳ್ಳಿ. ನೋವು ನಿವಾರಣೆಯಾಗುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss