ಬೆಂಡೇಕಾಯಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರ ಪಲ್ಯವನ್ನು ವಾರಕ್ಕೆ ಒಮ್ಮೆಯಾದರೂ ಮಾಡಿ ತಿನ್ನಿ. ಮಸಾಲಾ ಪಲ್ಯ ಹಾಗೂ ಡ್ರೈ ಪಲ್ಯ ತಿಂದು ಬೋರಾಗಿದ್ರೆ ಈ ಹೊಸ ರೆಸಿಪಿ ಟ್ರೈ ಮಾಡಿ.. ಈಸಿ ಬೆಂಡೆಕಾಯಿ ಪಲ್ಯ ಮಾಡೋದು ಹೀಗೆ..
ಬೇಕಾಗಿರುವ ಸಾಮಾಗ್ರಿಗಳು
- ರುಬ್ಬಲು
- ಈರುಳ್ಳಿ
- ಟೊಮ್ಯಾಟೊ
- ಹಸಿಮೆಣಸು
- ಶುಂಠಿ
- ಸಾಂಬಾರ್ ಪುಡಿ
- ಬೆಳ್ಳುಳ್ಳಿ
- ಕೊತ್ತಂಬರಿ
- ಕಾಯಿ
ಒಗ್ಗರಣೆಗೆ - ಸಾಸಿವೆ
- ಎಣ್ಣೆ
- ಕರಿಬೇವು
- ಈರುಳ್ಳಿ
- ಟೊಮ್ಯಾಟೊ
- ಮೊಸರು
- ಬೆಂಡೇಕಾಯಿ
- ಉಪ್ಪು
ಮಾಡುವ ವಿಧಾನ - ಮೊದಲು ರುಬ್ಬುವ ಎಲ್ಲ ವಸ್ತುಗಳನ್ನು ರುಬ್ಬಿಕೊಳ್ಳಿ
- ಇತ್ತ ಒಗ್ಗರಣೆಗೆ ಕರಿಬೇವು,ಈರುಳ್ಳಿ,ಟೊಮ್ಯಾಟೊ ಹಾಕಿ
- ನಂತರ ಬೆಂಡೇಕಾಯಿ ಹಾಕಿ ಬಾಡಿಸಿ, ಜೊತೆಗೆ ಮೊಸರು ಹಾಕಿ. ಇದರಿಂದ ಲೋಳೆ ಹೋಗುತ್ತದೆ.
- ನಂತರ ಇದಕ್ಕೆ ರುಬ್ಬಿದ ಮಿಶ್ರಣ ಹಾಕಿ
- ನಂತರ ಉಪ್ಪು ಹಾಕಿ ನೋಡಿಕೊಳ್ಳಿ
- ಹೀಗೆ ಮಾಡಿ ಬೆಂಡೇಕಾಯಿ ಪಲ್ಯ, ಇದಕ್ಕೆ ಅನ್ನ,ಚಪಾತಿ ಅಥವಾ ರೊಟ್ಟಿ ಕೂಡ ತಿನ್ನಬಹುದು.