Saturday, August 13, 2022

Latest Posts

ಬೆಟ್ಟದ ನೆಲ್ಲಿಕಾಯಿ ಎಂದರೆ ತುಂಬಾ ಇಷ್ಟವಾ? ಹಾಗಿದ್ದರೆ ಇದರ ಸೇವನೆಯಿಂದ ಏನೆಲ್ಲಾ ಲಾಭವಿದೆ ಗೊತ್ತಾ?

ಮಕ್ಕಳಿಂದ ಹಿರಿಯರವರೆಗೂ ಬಹು ಇಷ್ಟದ ಪದಾರ್ಥಗಳಲ್ಲಿ ಬೆಟ್ಟದ ನಲ್ಲಿಕಾಯಿ ಕೂಡ ಒಂದು. ನೆಲ್ಲಿಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್ ಹಾಗೂ ಆಂಟಿ ಸೆಪ್ಟಿಕ್ ಗುಣಗಳು ಹೆಚ್ಚಾಗಿದೆ. ಇದರ ಸೇವನೆಯಿಂದ ಏನೆಲ್ಲಾ ಉಪಯೋಗಗಳಿವೆ ಗೊತ್ತಾ?

ರಕ್ತ ಶುದ್ಧಿ: ನೆಲ್ಲಿಕಾಯಿ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಆಸ್ತಮಾ ಮತ್ತು ಬ್ರಾಂಕೈಟಿಸ್ ಸಮಸ್ಯೆಗಳನ್ನು ದೂರ ಮಾಡುತ್ತದೆ. ಈ ವೇಳೆ ರಕ್ತ ಶುದ್ಧಿಯಾಗಿ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.

ಸೌಂದರ್ಯ: ದಿನಾ ಬೆಳಗ್ಗೆ ನೆಲ್ಲಿ  ರಸಕ್ಕೆ ಜೇನುತುಪ್ಪ ಬೆರಸಿ ಸೇವಿಸಿದರೆ ಮುಖದ ಕಾಂತಿ ಹೆಚ್ಚಾಗಿ ಸೌಂದರ್ಯ ವೃದ್ಧಿಯಾಗುತ್ತದೆ.

ಕೂದಲು: ನೆಲ್ಲಿ ಕಾಯಿ ರಸವನ್ನು ಕೂದಲಿಗೆ ಹಚ್ಚುವುದರು ಅಥವಾ ಸೇವಿಸುವುದರಿಂದ ಕೂದಲ ದಪ್ಪ ಹಾಗೂ ಕಪ್ಪಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಮುಖದ ಕಲೆ: ಮುಖದ ಮೇಲಿನ ಕಲೆಗಳನ್ನು ತೆಗೆದು ಹಾಕಲು ನೆಲ್ಲಿಕಾಯಿ ಹೆಚ್ಚು ಸಹಕಾರಿಯಾಗಲಿದೆ. ನೆಲ್ಲಿಕಾಯಿ ಪೇಸ್ಟ್ ಮಾಡಿಕೊಂಡು ಅದನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಕಲೆ ದೂರ ಮಾಡುತ್ತದೆ.

ಮಲಬದ್ಧತೆ: ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆಲ್ಲಿಕಾಯಿ ರಾಮಬಾಣವಾಗಿ ಕೆಲಸ ಮಾಡುತ್ತದೆ.

ಮಧುಮೇಹ: ನೆಲ್ಲಿಕಾಯಿ ಸೇವನೆಯಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಇದು ದೇಹದಲ್ಲಿನ ಇನ್ಸುಲಿನ್ ಮ್ಟವನ್ನು ನಿಯಮಿತಕೊಳಿಸಲು ಸಹಕಾರಿಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss