ಬೇಸಿಗೆಗಾಲ ಬಂತೆಂದರೆ ಟಿವಿ ತುಂಬಾ ಸನ್ಸ್ಕ್ರೀನ್ಗಳದ್ದೇ ಜಾಹೀರಾತು. ಬೇಸಿಗೆಗಾಲದಲ್ಲಿ ಮನೆಯಲ್ಲಿದ್ದರೂ ಸನ್ಸ್ಕ್ರೀನ್ ಹಚ್ಚಲೇಬೇಕು. ಆದರೆ ನಾವೆಲ್ಲ ಅಂದುಕೊಂಡ ಹಾಗೆ ಬೇಸಿಗೆಗಾಲದಲ್ಲಿ ಮಾತ್ರ ಸನ್ಬರ್ನ್ ಆಗೋದಿಲ್ಲ, ಬೇರೆ ಸಮಯದಲ್ಲಿಯೂ ಆಗುತ್ತದೆ. ಹೇಗೆ? ಏನು ನೋಡಿ..
ಬೇಸಿಗೆಗಾಲ, ಬಿಸಿ ವಾತಾವರಣದಲ್ಲಿ ಮಾತ್ರ ಟ್ಯಾನ್ ಆಗೋದು, ಸನ್ ಬರ್ನ್ ಆಗೋದು ಅನ್ನೋದು ನಿಜವಲ್ಲ. ಎಲ್ಲ ಕಾಲದಲ್ಲೂ ಸ್ಕಿನ್ ಬರ್ನ್ ಆಗುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ಸೂರ್ಯನ ತೀಕ್ಷ್ಣ ಯುವಿ ಕಿರಣಗಳಿಂದ ಟ್ಯಾನ್ ಆಗುವುದು, ಸ್ಕಿನ್ ಬರ್ನ್ ಕೂಡ ಆಗುತ್ತದೆ.
ಹಾಗಾಗಿ ಸನ್ಸ್ಕ್ರೀನ್ ಹಚ್ಚೋದಕ್ಕೆ ಕಾಲ ನೋಡಬೇಡಿ, ಪ್ರತಿದಿನವೂ ಹಚ್ಚಿ!