spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಡೆಲ್ಟಾ ಭೀತಿ: ಮೂರನೇ ಡೋಸ್ ಲಸಿಕೆ ಅವಶ್ಯವೇ?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾ ಮೂರನೆ ಅಲೆ ಇನ್ನೇನು ಕಣ್ಣೆದುರು ಬರಲಿದ್ದು, ಎರಡು ಡೋಸ್ ವ್ಯಾಕ್ಸಿನ್ ಸಾಕಾ? ಅಥವಾ ಇನ್ನೂ ಒಂದು ಡೋಸ್ ಅವಶ್ಯಕತೆ ಇದೆಯಾ ಎನ್ನುವ ಸಂದೇಹ ಜನರಲ್ಲಿ ಮೂಡಿತ್ತು.
ಇದಕ್ಕೆ ಉತ್ತರ ಇಲ್ಲಿದೆ.. ಕೊರೋನಾ ತೀವ್ರತೆ ತಡೆಗಟ್ಟುವಲ್ಲಿ ಲಸಿಕೆಗಳು ಸಾಕಷ್ಟು ಪರಿಣಾಮಕಾರಿಯಾಗಿವೆ. ಈ ಕಾರಣದಿಂದ ಮೂರನೇ ಡೋಸ್ ಅವಶ್ಯಕವಲ್ಲ ಎಂದು ದಿ ಲ್ಯಾನ್ಸೆಟ್ ವರದಿಯಲ್ಲಿ ತಿಳಿಸಿದೆ.
ಡೆಲ್ಟಾ ರೂಪಾಂತರದಿಂದ ಹಲವು ದೇಶಗಳು ತತ್ತರಿಸಿಹೋಗಿವೆ. ಅಲ್ಲಿ ಹೆಚ್ಚುವರಿ ಡೋಸ್‌ಗಳನ್ನು ನೀಡಲಾಗುತ್ತಿದೆ. ಆದರೆ ಬಡ ರಾಷ್ಟ್ರಗಳಿಗೆ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅಲ್ಲಿನ ಲಕ್ಷಾಂತರ ಜನಕ್ಕೆ ಇನ್ನು ಮೊದಲನೆ ಡೋಸ್ ಸಿಕ್ಕಿಲ್ಲ. ಹೀಗಾಗಿ ವಿಶ್ವಸಂಸ್ಥೆ ಮೂರನೇ ಡೋಸ್ ಮೇಲೆ ನಿಷೇಧ ಹೇರಿದೆ.
ಡೆಲ್ಟಾ ಆತಂಕವಿದ್ದರೂ ಮೂರನೇ ಡೋಸ್ ಅವಶ್ಯ ಇಲ್ಲ ಎಂದು ಡಬ್ಲೂಎಚ್‌ಒ ಹೇಳಿದೆ.
ಕೋವಿಡ್‌ನ ತೀವ್ರ ಲಕ್ಷಣಗಳು, ಡೆಲ್ಟಾ ವಿರುದ್ಧವೂ ಲಸಿಕೆ ಹೋರಾಡಬಲ್ಲದು. ಇದಕ್ಕೆ ಮತ್ತೊಂದು ಡೋಸ್ ಅವಶ್ಯಕ ಅಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss