ಇನ್ನೇನು ವರ್ಕ್ ಫ್ರಂ ಹೋಮ್ ಮುಗಿದು ಎಲ್ಲರೂ ಆಫೀಸಿಗೆ ಮರಳುವ ಸಮಯ ಬಂದಿದೆ.
ಇಷ್ಟು ಸಮಯ ಮನೆಯ ಕೆಲಸ ಹಾಗೂ ಆಫೀಸ್ ಕೆಲಸವನ್ನು ಮನೆಯಿಂದಲೇ ಮ್ಯಾನೇಜ್ ಮಾಡುತ್ತಿದ್ದ ಹೆಣ್ಮಕ್ಕಳಿಗೆ ಇದೀಗ ಟೈಂಗೆ ಸರಿಯಾಗಿ ಆಫೀಸಿಗೆ ಹೋಗೋದು ಚಾಲೆಂಜಿಂಗ್ ಅನಿಸಬಹುದು. ಇವರಿಗಾಗಿ ಸಮಯ ಉಳಿತಾಯ ಮಾಡಲು ಕೆಲವು ಹ್ಯಾಕ್ಸ್ ಇಲ್ಲಿದೆ..
- ಊಟ ತಿಂಡಿ ಲಿಸ್ಟ್ ರೆಡಿ: ಸಂಜೆಯೇ ಕುಳಿತು ಮನೆಯವರೊಡನೆ ಮಾತನಾಡಿ, ಊಟ-ತಿಂಡಿಯ ಲಿಸ್ಟ್ ಮಾಡಿ, ಅಡುಗೆ ಮನೆಯಲ್ಲಿ ನೇತು ಹಾಕಿ. ಬೆಳಗ್ಗೆ ಎದ್ದ ನಂತರ ಎಲ್ಲರೂ ಏಳುವವರೆಗೂ ಕಾದು, ಏನು ತಿಂಡಿ ಮಾಡೋದು ಎಂದು ಕೇಳಿ ಡಿಸ್ಕಸ್ ಮಾಡುವ ಸಮಯ ಉಳಿಸಿ.
- ಫಾಸ್ಟ್ ನಿರ್ಧಾರ: ಫಾಸ್ಟ್ ಆದ ನಿರ್ಧಾರಗಳನ್ನು ಮಾಡಿ. ಇಂದು ಯಾವ ಬಟ್ಟೆ ಹಾಕೋದು ಅನ್ನೋದಕ್ಕೆ ಸಮಯ ವೇಸ್ಟ್ ಮಾಡುವುದು ಬೇಡ.
- ಟ್ರಾವೆಲ್ ಸಮಯ ವಿನಿಯೋಗಿಸಿ: ಆಫೀಸಿನ ಮೀಟಿಂಗ್ ಅಥವಾ ಯಾವುದಾದರೂ ಕೆಲಸ ಇದ್ದರೆ ಬಸ್ ಅಥವಾ ಮೆಟ್ರೋದಲ್ಲಿ ಟ್ರಾವೆಲ್ ಮಾಡುವಾಗ ಪ್ರಿಪೇರ್ ಆಗಿ. ಸಮಯ ಉಳಿಸಿ.
- ಮೊಬೈಲ್ ನೋಡಬೇಡಿ: ಆದಷ್ಟು ಮನೆಯಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಿ.ಎದ್ದ ತಕ್ಷಣ ಮೊಬೈಲ್ ನೋಡುತ್ತಾ ಕುಳಿತರೆ ಅಲ್ಲಿಯೇ ನಿಮ್ಮ ಸಮಯ ಹಾಳಾಗಿ ಹೋಗುತ್ತದೆ.
- ಕೆಲಸ ಶೇರ್ ಮಾಡಿ: ನಿಮ್ಮ ಮನೆಯಲ್ಲಿ ಯಾರೇ ಇದ್ದರೂ ಅವರ ಜೊತೆ ಕೆಲಸ ಶೇರ್ ಮಾಡಿಕೊಳ್ಳಿ. ಆಗ ನಿಮಗೂ ನಿಮ್ಮ ಕೆಲಸ ಮಾಡಲು ಸಮಯ ಸಿಗುತ್ತದೆ.
- ಎಕ್ಸ್ಟ್ರಾ ಕೆಲಸಕ್ಕೆ ನೋ: ನಿಮ್ಮದಲ್ಲದ ಕೆಲಸ ಬಂದರೆ ಅದಕ್ಕೆ ಇಲ್ಲ ಎನ್ನುವುದನ್ನು ಕಲಿಯಿರಿ. ಇರುವ ಜವಾಬ್ದಾರಿಯನ್ನು ಸರಿಯಾಗಿ ಮುಗಿಸಿದರೆ ಸಾಕು. ತಲೆ ಮೇಲೆ ಎಲ್ಲವನ್ನೂ ಎಳೆದುಕೊಳ್ಳಬೇಡಿ.
- ಸರಿಯಾಗಿ ಮಲಗಿ: ರಾತ್ರಿ ಸರಿಯಾದ ಸಮಯಕ್ಕೆ ಮಲಗಿದರೆ ಮಾತ್ರ ಬೆಳಗ್ಗೆ ಸರಿಯಾದ ಸಮಯಕ್ಕೆ ಏಳುತ್ತೀರಿ. ಅಲಾರಾಂ ಕಡೆ ಗಮನ ಇರಲಿ. ತಕ್ಷಣ ಎದ್ದು, ದೈನಂದಿನ ಕೆಲಸ ಆರಂಭಿಸಿ.