ನೀವು ಮೃದು ಸ್ವಭಾವದವರಾಗಿದ್ದು, ನಿಮಗೆ ತುಂಬಾ ಬೇಗ ಅಳು ಬರುತ್ತಾ? ಅಳೋದು ಒಳ್ಳೆಯ ಸೂಚನೆ ಅಲ್ಲಾ ಅಂತ ಎಲ್ಲರೂ ಹೇಳುತ್ತಾರೆ. ಆದರೆ ನಿಜವಾಗಿಯೂ ಅಳುವುದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ? ಇಲ್ಲಿದೆ ನೋಡಿ ..
ಒಳ್ಳೆ ಅನುಭವ: ಅಳುವುದರಿಂದ ಯಾರೂ ಕುಗ್ಗುವುದಿಲ್ಲ ಬದಲಿಗೆ ಅವರು ಮತಷ್ಟು ಬಲಿಷ್ಠರಾಗುತ್ತಾರೆ. ಇದೊಂದು ಒಳ್ಳೆಯ ಅನುಭವವಾಗಿದ್ದು, ಅಳುವವರು ತಮ್ಮ ಭಾವನೆಗಳನ್ನು ತಾವೇ ನಿಭಾಯಿಸಿಕೊಳ್ಳುತ್ತಾರೆ.
ನೋವಿನಿಂದ ಮುಕ್ತಿ: ಬೇಸರವಾದಾಗ ಅಳುವುದರಿಂದ ನಮ್ಮ ಮನಸ್ಸು ನಿರಾಳವಾಗಿ ನೋವು ಕಡಿಮೆಯಾಗುತ್ತದೆ. ಇದು ದೈಹಿಕ ಅಥವಾ ಮಾನಸಿಕ ನೋವುಗಳಿಂದಲೂ ಮುಕ್ತಿ ನೀಡುತ್ತದೆ.
ಮೂಡ್ ಫ್ರೆಶ್: ಅಳುವುದರಿಂದ ಮತ್ತಷ್ಟು ಧೈರ್ಯಶಾಲಿಗಳಾಗುತ್ತಾರೆ. ಇದು ನಮ್ಮ ಮೂಡ್ ಅನ್ನು ಫ್ರೆಶ್ ಮಾಡಿ ಮುಂದಿನ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ.
ಒತ್ತಡ: ಕಣ್ಣೀರಿನಲ್ಲಿರುವ ಸ್ಟ್ರೆಸ್ ಹಾರ್ಮೋನ್ ಗಳು ನಮ್ಮನ್ನು ಒತ್ತಡದಿಂದ ದೂರಾಗಲೂ ಸಹಾಯ ಮಾಡುತ್ತದೆ.
ನಿದ್ದೆ: ಅಳುವುದರಿಂದ ಮನಸ್ಸು ಹಗುರವಾಗುತ್ತದೆ, ನೋವು ಕಡಿಮೆಯಾಗುತ್ತದೆ. ಇದು ನಮಗೆ ನೆಮ್ಮದಿಯ ನಿದ್ದೆ ಲಭಿಸುತ್ತದೆ.
ಬ್ಯಾಕ್ಟೀರಿಯಾ: ಕಣ್ಣೀರಿನಲ್ಲಿರುವ ಐಸೋಜೋಮ್ ನಂತಹ ಅಂಶಗಳು ಕಣ್ಣಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ದೂರ ಮಾಡುತ್ತದೆ. ಇದು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.