ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅನಿಯಮಿತವಾದ ಪೀರಿಯಡ್ ಸೈಕಲ್ ನಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ಮಹಿಳೆಯರು ಪ್ರತಿ ತಿಂಗಳಿನ ಪೀರಿಯಡ್ಸ್ ನಲ್ಲಿ ಸಾಕಷ್ಟು ನೋವನ್ನು ಅನುಭವಿಸುತ್ತಾರೆ. ಅದರಲೂ ಕೆಲವೊಮ್ಮೆ ಸರಿಯಾದ ಸಮಯದಲ್ಲಿ ಪೀರಿಯಡ್ಸ್ ಆಗುವುದಿಲ್ಲ. ಇದಕ್ಕೆ ನೀವು ಮನೆಯಲ್ಲೇ ಟ್ರೈ ಮಾಡಿ ಈ ಟಿಪ್ಸ್..

ಯೋಗ:
ದಿನಕ್ಕೆ 30ರಿಂದ 40 ನಿಮಿಷಗಳಂತೆ ಕನಿಷ್ಠ 5 ತಿಂಗಳಂತೆ ಯೋಗ ಮಾಡಿದರೆ ಅನಿಯಮಿತ ಪೀರಿಯಡ್ಸ್ ಸಮಸ್ಯೆ ದೂರವಾಗುತ್ತದೆ. ಇದರಿಂದ ಮುಟ್ಟಿನ ದಿನಗಳಲ್ಲಿ ಕಾಡುವ ಹೊಟ್ಟೆ ನೋವಿನಿಂದ ಮುಕ್ತಿ ನೀಡುತ್ತದೆ.

ದೇಹದ ತೂಕ:
ದೇಹವನ್ನು ಆರೋಗ್ಯವಾಗಿರಿಸುವುದು ನಿಮ್ಮ ಪೀರಿಯಡ್ಸ್ ಗೂ ಸಹಕಾರಿಯಾಗಲಿದೆ. ತುಂಬಾ ತೆಳ್ಳಗೆ ಅಥವ ಹೆಚ್ಚು ತೂಕ ಇರುವುದರಿಂದ ಅನಿಯಮಿತ ಪೀರಿಯಡ್ಸ್ ಸಮಸ್ಯೆ ಕಾಡುತ್ತದೆ. ಹಾಗಾಗಿ ನಿಮ್ಮ ತೂಕದ ಬಗ್ಗೆ ಅಗತ್ಯ ಕಾಳಜಿ ವಹಿಸಿ.

ಅನಾನಸ್:
ಪ್ರತಿದಿನ ಒಂದು ಕಪ್ ಅನಾನಸ್ ಸೇವಿಸುವುದರಿಂದ ದೇಹಕ್ಕೆ ಪೋಷಕಾಂಶ ನೀಡುವುದು ಮಾತ್ರವಲ್ಲದೆ ನಿಮ್ಮ ಪೀರಿಯಡ್ಸ್ ಸರಿಯಾದ ಸಮಯಕ್ಕೆ ಆಗುತ್ತದೆ.

ಚಕ್ಕೆ ಪುಡಿ:
ಪ್ರತಿದಿನ ಬೆಳಗ್ಗೆ ಖಾಲಿ ಕೊಟ್ಟೆಯಲ್ಲಿ ಬಿಸಿ ನೀರಿಗೆ ಚಕ್ಕೆ ಪುಡಿ, ಲಿಂಬು ರಸ ಬೆರಸಿ ಸೇವಿಸುವುದರಿಂದ ನಿಮ್ಮ ಪೀರಿಯಡ್ಸ್ ಸಮಸ್ಯೆ ದೂರಾಗುತ್ತದೆ.

ಜಂಕ್ ಫುಡ್:
ಜಂಕ್ ಫುಡ್ ಸೇವಿಸುವುದನ್ನು ಕಡಿಮೆ ಮಾಡುವುದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಸರಿಯಾದ ಆಹಾರ ಕ್ರಮದಿಂದ ನಿಮ್ಮ ಪೀರಿಯಡ್ಸ್ ಸರಿಯಾದ ಸಮಯಕ್ಕೆ ಆಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss