MUST READ ಕೆಲಸದ ಮಧ್ಯೆ ನಿದ್ದೆ ಬರುತ್ತದಾ? ಈ ರೀತಿ ಮಾಡಿದ್ರೆ ನಿದ್ದೆ ಕಡಿಮೆ ಆಗತ್ತೆ!

ಕೆಲಸದ ಮಧ್ಯೆ ಆಗಾಗ ಎಂದಾದರೂ ನಿದ್ದೆ ಬಂದಿದ್ಯಾ? ಅದರಲ್ಲೂ ಊಟದ ನಂತರ ಹೆಚ್ಚು ಕೆಲಸ ಇಲ್ಲದೆ ಇದ್ದಾಗ ನಿದ್ದೆ ಬರೋದು ಮಾಮೂಲು. ಈ ರೀತಿ ನಿದ್ದೆ ಬಂದು ಕೆಲಸದ ಮೇಲೆ ಪರಿಣಾಮ ಬೀರ‍್ತಾ ಇದೆ ಎಂದರೆ ಈ ಟಿಪ್ಸ್ ನಿಮಗೆ ಸಹಾಯವಾಗಬಹುದು..

  • ಒಳ್ಳೆಯ ನಿದ್ದೆ ರಾತ್ರಿಯೇ ಮಾಡಿಬಿಟ್ರೆ ಬೆಳಗ್ಗೆ ಫ್ರೆಶ್ ಆಗಿಯೇ ಇರ‍್ತೀರ, ಮೊಬೈಲ್ ಬಿಟ್ಟು ನಿದ್ದೆ ಮಾಡಿ.
  • ಯಾವಾಗಲೂ ನೀರು ಕುಡಿಯುತ್ತಾ ಇರಿ, ದೇಹ ಹೈಡ್ರೇಟ್ ಆಗಿರಲಿ.
  • ಮುಖಕ್ಕೆ ತಣ್ಣೀರು ಎರಚಿಕೊಳ್ಳಿ, ನಿದ್ದೆ ಓಡಿಹೋಗುತ್ತದೆ.
  • ಸಕ್ಕರೆ ಅಂಶ ಇರುವ ಪಾನೀಯಗಳನ್ನು ತ್ಯಜಿಸಿ
  • ಕೆಲಸದ ಮಧ್ಯೆ ಆಗಾಗ ಬ್ರೇಕ್ ಪಡೆಯಿರಿ ಬ್ರೇಕ್ ಇಲ್ಲದಿದ್ದರೆ ನಿದ್ದೆ ಬರೋದು ಸಾಮಾನ್ಯ.
  • ಸ್ನೇಹಿತರ ಜೊತೆ ಏನಾದರೂ ಇಂಟ್ರೆಸ್ಟಿಂಗ್ ವಿಷಯ ಮಾತನಾಡಿ.
  • ನಿಮ್ಮ ಸುತ್ತಮುತ್ತಲ ವಾತಾವರಣ ನಿದ್ದೆ ಬರಬಾರದು ಹಾಗೆ ನೋಡಿಕೊಳ್ಳಿ.
  • ಹಾಡುಗಳ್ನನು ಕೇಳಿ, ಹಾಡುಗಳನ್ನು ಕೇಳಿದರೆ ನಿದ್ದೆ ಹೋಗಬಹುದು.
  • ಎದ್ದು ಓಡಾಡಿ, ಕೂತಿರುವ ಜಾಗ ಬಿಟ್ಟು ಎದ್ದು ಎರಡು ನಿಮಿಷ ಓಡಾಡಿ ಬನ್ನಿ. ನಿದ್ದೆ ಹೋಗುತ್ತದೆ.
  • ನಿಮ್ಮ ಕೆಲಸದಲ್ಲೇ ಇಂಟ್ರೆಸ್ಟಿಂಗ್ ಎನಿಸುವ ಕೆಲಸವೊಂದನ್ನು ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!