MUST READ | ಬೆಳಗ್ಗೆ ಬೆಳಗ್ಗೆ ಎಲ್ಲರ ಮೇಲೆ‌ ಕೋಪಿಸಿಕೊಂಡು ರೇಗ್ತೀರಾ? ಕೋಪ ಕಮ್ಮಿ‌ ಮಾಡೋಕೆ ಕೆಲವು ಟಿಪ್ಸ್ ಇಲ್ಲಿದೆ..

ರಾತ್ರಿ ಬಿದ್ದ ಕೆಟ್ಟ ಕನಸು, ಹಿಂದಿನ ದಿನದ ಕೆಟ್ಟ ಮೂಡ್, ಬೆಳಗ್ಗೆ ಎದ್ದಾಗ ಯಾವುದೋ ಕಿರಿಕಿರಿ ಹೀಗೆ ಬೆಳಗ್ಗೆ ಎದ್ದ ತಕ್ಷಣ ಸಣ್ಣ ಸಣ್ಣ ವಿಷಯಕ್ಕೂ ಕೋಪ ಬರುತ್ತದಾ? ನೀವು ಕೋಪ ಮಾಡಿಕೊಳ್ಳೋದ್ರಿಂದ ಬೇರೆಯವರಿಗೆ ಹಾನಿ ಸರಿ, ಆದರೆ ಅದು ನಿಮಗೂ ಕೂಡ ಹಾನಿ ಅನ್ನೋದನ್ನು ಮರೀಬೇಡಿ. ಕೋಪ ಕಂಟ್ರೋಲ್ ಮಾಡೋಕೆ ಹೀಗೆ ಮಾಡಿ…

  • ಯಾವ ವಿಷಯಕ್ಕೆ ಕೋಪ ಬರುತ್ತದೆ? ಟಾಯ್ಲೆಟ್ ಸೀಟ್ ಮೇಲೆ ನೀರು ಇದ್ದರೂ ಹಿಂದಿನವರು ಒರೆಸದೇ ಹೋಗ್ತಾರಾ? ನಿಮ್ಮ ಬಾತ್‌ರೂಂ ರೂಲ್ಸ್ ಬಗ್ಗೆ ಮನವರಿಕೆ ಮಾಡಿಕೊಡಿ, ನಿಮಗೆ ಅದು ಯಾಕೆ ಇಷ್ಟ ಇಲ್ಲ ತಿಳಿಸಿ.
  • ಮಾತನಾಡುವ ಮುನ್ನ ನಿಮ್ಮ ವಾಕ್ಯಗಳನ್ನು ನೀವೇ ಕೇಳಿಸಿಕೊಳ್ಳಿ, ಸಂದರ್ಭವನ್ನು ಡ್ಯಾಮೇಜ್ ಮಾಡುತ್ತದೋ ಅಥವಾ ಸಂಬಂಧವನ್ನೇ ಡ್ಯಾಮೇಜ್ ಮಾಡುತ್ತದಾ ಯೋಚಿಸಿ.
  • ಸಿಟ್ಟಿನಲ್ಲಿ ಮಾತು ಆಡದೇ ಇದ್ದಷ್ಟು ಒಳ್ಳೆಯದು, ಆಗ ಹೊರಡುವ ಮಾತುಗಳು ಎದುರಿನ ವ್ಯಕ್ತಿಗೆ ಹರ್ಟ್ ಮಾಡಬೇಕು ಎನ್ನುವ ಉದ್ದೇಶದ್ದೇ ಆಗಿರುತ್ತದೆ. ಸಿಟ್ಟು ಬಂದಾಗ ಮಾತನಾಡದೇ ಎದ್ದು ಹೋಗೋದು ಸೂಕ್ತ.
  • ವ್ಯಾಯಾಮ ಮಾಡುವ ಅಭ್ಯಾಸ ಮಾಡಿಕೊಳ್ಳಿ, ನಿಮ್ಮ ಕೋಪವನ್ನೆಲ್ಲಾ ಶಕ್ತಿಯಾಗಿ ಬದಲಾಯಿಸಿ.
  • ಸಿಟ್ಟು ಮಾಡುವ ಬದಲು ಈಗೇನು ಮಾಡಬಹುದು ಎನ್ನುವ ಬಗ್ಗೆ ಆಲೋಚಿಸಿ, ಆಗಿದ್ದು ಆಗಿ ಹೋಗಿದೆ. ಅದನ್ನು ಸರಿಪಡಿಸೋಕೆ ಆಗೋದಿಲ್ಲ. ಆಲ್‌ಟರ್‌ನೇಟೀವ್ ಬಗ್ಗೆ ಯೋಚನೆ ಮಾಡಿ.
  • ನನಗೆ ಅನಿಸುತ್ತದೆ, ನನ್ನ ಪ್ರಕಾರ, ನಾನು ಹೇಳುವುದೇನೆಂದರೆ.. ಹೀಗೆ ನಾನು ಎನ್ನುವ ಪದಬಳಕೆ ಇರಲಿ.

 

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!