spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮಗೆ ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗುವ ಅಭ್ಯಾಸವಿದೆಯೇ? ಹಾಗಿದ್ರೆ ತಪ್ಪದೇ ಇದನ್ನು ಓದಿ..

- Advertisement -Nitte

ಕೆಲವರಿಗೆ ರಾತ್ರಿ ಏನನ್ನು ಸೇವಿಸದೇ ಖಾಲಿ ಹೊಟ್ಟೆಯಲ್ಲಿ ಮಲಗುವ ಅಭ್ಯಾಸವಿರುತ್ತದೆ. ತೂಕ ಇಳಿಸಬೇಕೆಂದು ಕೆಲವರು ಏನನ್ನು ಸೇವಿಸದೆ ಹಾಗೆಯೇ ಮಲಗುತ್ತಾರೆ. ಖಾಲಿ ಹೊಟ್ಟೆಯಲ್ಲಿ ಮಲಗಿದರೆ ತೂಕ ಇಳಿಯುವುದಿಲ್ಲ. ಬದಲಾಗಿ ತೂಕ ಹೆಚ್ಚುತ್ತದೆ. ಅಪರೂಪಕ್ಕೆ ಖಾಲಿ ಹೊಟ್ಟೆಯಲ್ಲಿ ಮಲಗುವುದು ಸರಿ. ಆದರೆ ದಿನವೂ ಇದನ್ನೆ ರೂಢಿಸಿಕೊಂಡರೆ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ನಿದ್ರಾ ಹೀನತೆ:
ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಿದರೆ ನಿದ್ರಾ ಹೀನತೆ ಸಮಸ್ಯೆ ಎದುರಾಗುತ್ತದೆ. ಸರಿಯಾಗಿ ನಿದ್ದೆ ಬರುವುದಿಲ್ಲ. ಮೆದುಳು ಏನಾದರೂ ತಿನ್ನುವಂತೆ ಪದೇ ಪದೆ ನಿಮ್ಮನ್ನು ಎಚ್ಚರಿಸುತ್ತದೆ.

ಚಯಾಪಚಯ ಕ್ರಿಯೆ:
ಖಾಲಿ ಹೊಟ್ಟೆಯಲ್ಲಿ ಮಲಗಿದರೆ ಚಯಾಪಚಯ ಕ್ರಿಯೆ ಮತ್ತು ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ.

ಅಮೈನೋ ಆಮ್ಲ:
ಖಾಲಿ ಹೊಟ್ಟೆಯಲ್ಲಿ ಮಲಗಿದರೆ ಆಮೈನೋ ಆಮ್ಲ ದಕ್ಷತೆ ಮತ್ತು ಪ್ರೋಟೀನ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸ್ನಾಯು ದುರ್ಬಲವಾಗುತ್ತದೆ.

ಆಯಾಸ:
ಯಾವುದೇ ಆಹಾರ ಸೇವಿಸದೆ ಮಲಗುವುದರಿಂದ ನಿಮ್ಮಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಆಗುತ್ತದೆ. ಶಕ್ತಿಯ ಮಟ್ಟ ಕಡಿಮೆ ಆಗಿ ಇದರಿಂದ ಬೇಗ ದಣಿವು ಆದ ಅನುಭವವಾಗುತ್ತದೆ.

ತೂಕ ಇಳಿಕೆ:
ಕೆಲವರು ತೂಕ ಇಳಿಸಲೆಂದು ರಾತ್ರಿ ಊಟ ಬಿಡುತ್ತಾರೆ. ಕಡಿಮೆ ತಿನ್ನಬೇಕು ಎನ್ನುವುದು ಸರಿ ಆದರೆ ಏನು ತಿನ್ನದೇ ಮಲಗುವುದು ತಪ್ಪು. ಇದರಿಂದ ತೂಕ ಇಳಿಕೆಯಲ್ಲ, ತೂಕ ಹೆಚ್ಚಳವಾಗುತ್ತದೆ. ದೇಹಕ್ಕೆ ಸಿಗಬೇಕಾದ ಕ್ಯಾಲ್ಸಿಯಂ, ಪ್ರೋಟಿನ್ ಸಿಗಲೇ ಬೇಕು.

ಆ್ಯಸಿಡಿಟಿ:
ಖಾಲಿ ಹೊಟ್ಟೆಯಲ್ಲಿದ್ದಾಗ ಆಮ್ಲೀಯತೆ ಹೆಚ್ಚುತ್ತದೆ. ದೇಹದಲ್ಲಿ ಆಮ್ಲೀಯತೆಯ ಪ್ರಮಾಣ ಹೆಚ್ಚಿದಾಗ ಆಯಸಿಡಿಟಿ, ಹುಳಿ ತೇಗು ಸಮಸ್ಯೆ ಹೆಚ್ಚಾಗುತ್ತದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss