spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮಗೆ ವೈಟ್ ಡಿಸ್ಚಾರ್ಜ್ ಸಮಸ್ಯೆ ಇದೆಯೇ? ಚಿಂತಿಸಬೇಡಿ, ಈ ಮನೆಮದ್ದು ಟ್ರೈ ಮಾಡಿ

- Advertisement -Nitte

ಸಾಮಾನ್ಯವಾಗಿ‌ ವೈಟ್ ಡಿಸ್ಚಾರ್ಜ್ (ಬಿಳಿ ಸೆರಗು‌) ಸಮಸ್ಯೆ ಪ್ರತಿ ಮಹಿಳೆಯರಿಗೂ ಒಂದಲ್ಲಾ ಒಂದು ವಯಸ್ಸಿನಲ್ಲಿ ಕಾಡುತ್ತದೆ. ತುಂಬಾ ಜನ ಈ‌ ಬಗ್ಗೆ ಮುಜುಗರ ಮಾಡಿಕೊಂಡು ವೈದ್ಯರಲ್ಲಿ ಹೇಳಿಕೊಳ್ಳುವುದಿಲ್ಲ. ಬಿಳಿ‌ ಸೆರಗು ಸಮಸ್ಯೆಯ ಬಗ್ಗೆ ಹೆದರುವುದು ಬೇಡ. ಆದರೆ‌ ಇದನ್ನು ನಿರ್ಲಕ್ಷ್ಯಿಸಬೇಡಿ. ಸಮಸ್ಯೆ ಉಲ್ಬಣವಾಗುವ ಮೊದಲು ಮನೆಮದ್ದನ್ನು ಮಾಡಿ. ಬಿಳಿ ಸೆರಗು ಸಮಸ್ಯೆಗೆ ಇಲ್ಲಿದೆ ಸಿಂಪಲ್ ಮನೆಮದ್ದುಗಳು..

ಬಿಳಿ ದಾಸವಾಳ:
ಬಿಳಿ ದಾಸವಾಳ ಗಿಡದ ಚಕ್ಕೆಯನ್ನು ಲಿಂಬೆಹಣ್ಣಿನ ರಸದಲ್ಲಿ ತೇಯ್ದು ಅದನ್ನು ಮೂರು‌ ಹೊತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದನ್ನು ಏಳು ದಿನಗಳ ಕಾಲ ಮಾಡಬೇಕು. ಬಿಳಿ ಸೆರಗು ಸಮಸ್ಯೆ ನಿವಾರಣೆಯಾಗುತ್ತದೆ.

ಬಾಳೆಹಣ್ಣು:
ಕರಿ ಬಾಳೆಹಣ್ಣನ್ನು ತೆಗೆದುಕೊಂಡು ಅದಕ್ಕೆ ಆಕಳು ತುಪ್ಪವನ್ನು‌ ಹಚ್ಚಿಕೊಂಡು ಬೆಳಿಗ್ಗೆ ಎದ್ದ ತಕ್ಷಣ ತಿನ್ನುವುದರಿಂದ ಬಿಳಿ ಸೆರಗು ಸಮಸ್ಯೆ ನಿವಾರಣೆಯಾಗುತ್ತದೆ.

ಉಗುರು ಬಿಸಿ‌ನೀರು, ಅರಿಶಿಣ, ಉಪ್ಪು:
ಉಗುರು ಬಿಸಿ ನೀರಿಗೆ ಅರಿಶಿಣ ಮತ್ತು ಉಪ್ಪನ್ನು ಸೇರಿಸಿಕೊಳ್ಳಿ. ಇದರಿಂದ ನಿಮ್ಮ ಖಾಸಗಿ ಜಾಗವನ್ನು ದಿನದಲ್ಲಿ ಐದಕ್ಕೂ ಹೆಚ್ಚುಬಾರಿ ತೊಳೆದುಕೊಳ್ಳಿ. ಯಾವುದೇ ಸೋಂಕು ತಗುಲಿದ್ದರೆ ನಿವಾರಣೆಯಾಗುತ್ತದೆ. ಬಿಳಿ ಸೆರಗು ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

ಪೇರಲೆ ಸೊಪ್ಪು:
ಪೇರಲೆ ಸೊಪ್ಪನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಆ ನೀರನ್ನು ದಿನದಲ್ಲಿ ಎರಡು ಹೊತ್ತು ಕುಡಿಯುವುದರಿಂದ ಬಿಳಿ ಸೆರಗು ನಿವಾರಣೆಯಾಗುತ್ತದೆ

ಕ್ಯಾರೆಟ್ , ಬೀಟಾ ಜ್ಯೂಸ್:
ಕ್ಯಾರೆಟ್ ನಲ್ಲಿ ಬೀಟಾ ಕ್ಯಾರೋಟೀನ್ ಅಂಶವಿದ್ದು ಇದು ನಿಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.ಎರಡು ಕ್ಯಾರೆಟ್ ತೆಗೆದುಕೊಂಡು ಗ್ರೈಂಡರ್ ನಲ್ಲಿ ಹಾಕಿ ಚೆನ್ನಾಗಿ  ಜ್ಯೂಸ್ ಮಾಡಿಕೊಂಡು ದಿನಕ್ಕೆರಡು ಬಾರಿ ಸೇವಿಸುತ್ತಾ ಬನ್ನಿ. ಬಿಳಿ ಸೆರಗು ಸಮಸ್ಯೆ ಕಡಿಮೆಯಾಗುವರೆಗೆ ಇದನ್ನು ಸೇವಿಸಿ.

ಅಲೋವೆರಾ:
ಅಲೋವೆರಾ  ಜೆಲ್ ಅನ್ನು ನೋವಿರುವ ಜಾಗದಲ್ಲಿ ಹಚ್ಚಿ ಒಣಗಲು ಬಿಡಿ. ಇದರಿಂದ ನಿಮಗೆ ತಂಪಾದ ಅನುಭವ ಉಂಟಾಗಿ ಬಿಳಿ ಸೆರಗು ಮತ್ತು ನೋವು ಕಡಿಮೆಯಾಗುತ್ತದೆ. ಇದನ್ನು ದಿನಕ್ಕೆ ಎರಡು ಸಲಿ ಮಾಡಿಕೊಳ್ಳಿ.

ಬೆಳ್ಳುಳ್ಳಿ ಎಣ್ಣೆ:
5 ಬೆಳ್ಳುಳ್ಳಿಯನ್ನು ತೆಗದುಕೊಂಡು ಅದಕ್ಕೆ ಆಲೀವ್ ಆಯಲ್ ಎಣ್ಣೆಯನ್ನು ಸೇರಿಸಿಕೊಂಡು ಅದನ್ನು ಕುದಿಸಬೇಕು. ನಂತರ ನಿಮ್ಮ ಖಾಸಗಿ ಅಂಗಕ್ಕೆ ಉಗುರು ಬೆಚ್ಚಗಿರುವಾಗ ನೇರವಾಗಿ ಹಚ್ಚಿಕೊಳ್ಳಬಹುದು. ಇದನ್ನು ಹಚ್ಚಿದರೆ ನೋವು ನಿವಾರಣೆಯಾಗುತ್ತದೆ. ಮತ್ತು ಬಿಳಿ ಸೆರಗು ಸಮಸ್ಯೆ ನಿವಾರಣೆಯಾಗುತ್ತದೆ.

ಮೆಂತೆ:
ಕೆಲವು ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ,  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಬಿಳಿ ಸೆರಗಿಗೆ ಇದು ಬೆಸ್ಟ್ ಮನೆ ಮದ್ದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss