Monday, August 15, 2022

Latest Posts

ಸಣ್ಣಪುಟ್ಟ ವಿಚಾರಕ್ಕೆ ನೀವು ಬೇಜಾರು ಆಗುತ್ತೀರಾ? ನಿಮ್ಮ ಮೂಡ್ ಫ್ರೆಶ್ ಆಗಲು ಈ ಟಿಪ್ಸ್ ಫಾಲೋ ಮಾಡಿ

ಜೀವನದಲ್ಲಿ ಯಾರಿಗೆ ಬೇಸರ ಆಗೋದಿಲ್ಲ ಹೇಳಿ. ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ಮನನೊಂದುಕೊಳ್ಳುತ್ತೇವೆ. ಕೆಲವರಿಗೆ ಕೆಲಸದ ಒತ್ತಡ, ಆರ್ಥಿಕ ಕಷ್ಟ, ಆರೋಗ್ಯ, ದಬ್ಬಾಳಿಕೆ ಸೇರಿದಂತೆ ಅನೇಕ ನೋವುಗಳಿಂದ ಬಳಲುತ್ತಿರುತ್ತಾರೆ. ಈ ವೇಳೆ ಏನು ಮಾಡಬೇಕು? ಏನು ಮಾಡಿದರು ಮನಸ್ಸು ಹಸನ್ಮುಖವಾಗುತ್ತದೆ ಅನ್ನೋದಕ್ಕೆ ಇಲ್ಲಿದೆ ಕೆಲವು ಟಿಪ್ಸ್:

  • ಏನಾದರು ಕಲೆ ರೂಢಿಸಿಕೊಳ್ಳಿ: ನೀವು ಯಾವಾಗಲೂ ಮಾಡಬೇಕು ಎಂದುಕೊಂಡಿದ್ದ ಒಂದಷ್ಟು ಕ್ರಿಯೇಟಿವ್ ಆರ್ಟ್ ವರ್ಕ್ ಗಳನ್ನು ಮಾಡಿ. ಇದು ನಿಮ್ಮ ಮೂಡ್ ಫ್ರೆಶ್ ಮಾಡುತ್ತದೆ.
  • ಹಾಡು ಕೇಳಿ, ನೃತ್ಯ ಮಾಡಿ: ನಿಮಗೆ ಹಾಡುವ ಅಥವಾ ಡ್ಯಾನ್ಸ್ ಮಾಡುವ ಆಸಕ್ತಿ ಇದ್ದರೆ ಖಂಡಿತಾ ಅದನ್ನು ದೂರ ಮಾಡಬೇಡಿ. ಇದೊಂದು ಅದ್ಭುತ ಅವಕಾಶ ಎಂದು ಪರಿಗಣಿಸಿ.
  • ಕ್ಷಮಿಸಿಬಿಡಿ: ಯಾರಿಂದಾದರೂ ನೀವು ನೋವನುಭವಿಸಿದ್ದರೆ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗದೇ ಅವರನ್ನು ಕ್ಷಮಿಸಿಬಿಡಿ. ಇದರಿಂದ ನಿಮಗೆ ಆಗುವ ಖುಷಿಯನ್ನು ನೀವೆ ತಿಳಿಯಬಹುದು.
  • ಮಕ್ಕಳೊಂದಿಗೆ ಆಟ ಆಡಿ: ಮನಸ್ಸಿಗೆ ಬೇಸರವಾದಾಗ ಆದಷ್ಟು ನಿಮ್ಮ ಸಮಯವನ್ನು ಮಕ್ಕಳೊಂದಿಗೆ ಕಳೆಯಿರಿ.
  • ಹೋಟೆಲ್ ಗೆ ಹೋಗಿ: ಬೇಜಾರು ಅಂತ ಏನು ತಿನ್ನದೆ ಕೊರಗುತ್ತಾ ಕೂರಬೇಡಿ. ಬದಲಿಗೆ ಮನಸ್ಸನ್ನು ಹಗುರಗೊಳಿಸಲು ನಿಮ್ಮಿಷ್ಟದ ಹೋಟೆಲ್ ಗೆ ಹೋಗಿ ಚೆನ್ನಾಗಿ ತಿಂದು ಬನ್ನಿ. ಇದು ನಿಮ್ಮ ಬೇಸರದ ಮೂಡ್ ನಿಂದ ಹೊರಬರಲು ಸಹಾಯ ಮಾಡುತ್ತದೆ.
  • ನಿಮ್ಮ ಫೇವರೇಟ್ ಬೈಕ್ ನಲ್ಲಿ ರೈಡ್ ಹೋಗಿ: ಬೇಜಾರಾಗಿದೆ ನಾನು ಇನ್ನು ಮುಂದೆ ಏನು ಮಾಡೋದಿಲ್ಲ ಅಂತ ಸುಮ್ಮನೆ ಕೂರಬೇಡಿ. ಮನಸ್ಸು ಹಗುರ ಆಗೋದಿಕ್ಕೆ ನಿಮ್ಮ ಬೈಕ್ ನಲ್ಲಿ ಒಂದು ರೈಡ್ ಹೋಗಿ ಬನ್ನಿ…

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss