ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮನುಷ್ಯನ ಹವ್ಯಾಸದಿಂದ ಪ್ರಾರಂಭವಾದ ಅಕ್ವೇರಿಯಂ ಗೀಳು ಈಗ ಮನೆಗಳ ಅಂದ ಹೆಚ್ಚಿಸುವಲ್ಲಿಯೂ ಟ್ರೇಂಡ್ ಆಗಿದೆ. ಮೀನುಗಳು ಅಕ್ವೇರಿಯಂ ನಲ್ಲಿ ಆಚೆಯಿಂದ ಈಚೆಗೆ ಓಡಾಡುತ್ತಿದ್ದರೆ ಅವುಗಳನ್ನು ನೋಡುವುದೇ ಖುಷಿ ಎನ್ನುತ್ತಾರೆ ಹಲವರು.
ನಿಮ್ಮ ಮನೆಯಲ್ಲಿಯೂ ಅಕ್ವೇರಿಯಂ ಇದ್ದು, ನೀವು ಕೂಡ ಅಲ್ಲಿ ಗೋಲ್ಟ್ ಫಿಶ್ ಸಾಕಿದ್ದೀರಾ? ಗೋಲ್ಡ್ ಫಿಶ್ ಗಾತ್ರ ದೊಡ್ಡದಾದ ಮೇಲೆ ಅಕ್ವೇರಿಯಂ ನಲ್ಲಿ ಜಾಗ ಸಾಕಾಗಿಲ್ಲ ಎಂದು ಹತ್ತಿರ ಕೊಳ ಅಥವಾ ಸರೋವರದಲ್ಲಿ ಬಿಟ್ಟಿದ್ದೀರಾ? ಹಾಗಾದ್ರೆ ನೀವು ಈ ಮಾಹಿತಿ ತಿಳಿದುಕೊಳ್ಳಲೇ ಬೇಕು.
ಗೋಲ್ಡ್ ಫಿಶ್ ಗಳು ಬೃಹತ್ ಆಹಾರದಲ್ಲಿ ಬೆಳೆಯುವ ಮೀನು ಜಾತಿಗೆ ಸೇರುತ್ತವೆ. ಇವು ಇತರೆ ಮೀನುಗಳಿಗೆ ಮಾತ್ರವಲ್ಲ ಪರಿಸರಕ್ಕು ಅಪಾರ ಪ್ರಮಾಣದಲ್ಲಿ ತೊಂದರೆಯುಂಟು ಮಾಡುತ್ತದೆ. ಈಗಾಗಲೇ ಎಚ್ಚೆತ್ತುಕೊಂಡ ಅಮೆರಿಕಾದ ಮಿನ್ನೇಸೋಟದ ಅಧಿಕಾರಿಗಳು ಸರೋವರಗಳಿಗೆ ಗೋಲ್ಡ್ ಫಿಶ್ ಗಳನ್ನು ಬಿಡಬೇಡಿ ಎಂದು ಅಕ್ವೇರಿಯಂ ಮಾಲೀಕರಿಗೆ ಮನವಿ ಮಾಡಿದೆ.
ಗೋಲ್ಡ್ ಫಿಶ್ ಗಳಿಂದ ಪರಿಸರಕ್ಕೆ ಆಗುತ್ತಿರುವ ತೊಂದರೆಯನ್ನು ಗಂಭೀರವಾಗಿ ತೆಗೆದುಕೊಂದ ಮಿನ್ನೇಸೋಟ ಕೌಂಟಿ ವಾಟರ್ ಅಧಿಕಾರಿಗಳು ಕಳೆದ ನವೆಂಬರ್ ನಲ್ಲಿ ಸರೋವರವೊಂದರಲ್ಲಿ ಬೃಹತ್ ಆಕಾರದಲ್ಲಿ ಬೆಳೆದಿರುವ 50,000 ಗೋಲ್ಡ್ ಫಿಶ್ ಗಳು ಆಚೆ ತೆಗೆದಿದ್ದಾರೆ.
ಗೋಲ್ಡ್ ಫಿಶ್ ಗಳು ಚಳಿಗಾಲದಲ್ಲಿ ಕಡಿಮೆ ಮಟ್ಟದ ಆಮ್ಲಜನಕದ ಮೂಲಕ ಸುಲಭವಾಗಿ ಸಂತಾನೋತ್ವತ್ತಿ ಮಾಡುತ್ತವೆ. ಕಡಿಮೆ ಆಮ್ಲಜನಕದಲ್ಲಿಯೂ ಆರಾಮವಾಗಿ ಬದುಕುತ್ತವೆ. ಬಹಳ ಬೇಗ ಬೃಹದಾಕಾರದಲ್ಲಿ ಬೆಳವಣಿಗೆ ಹೊಂದುವ ಜಾತಿಗೆ ಈ ಫಿಶ್ ಗಳು ಸೇರುತ್ತವೆ. ಸರೋವರದ ತಳ ಮಟ್ಟದಲ್ಲಿ ಬೆಳೆಯು ಸಸ್ಯಗಳನ್ನು ಕಿತ್ತು ಹಾಕಿ ಪರಿಸರಕ್ಕೆ ಹಾನಿ ಮಾಡುತ್ತಿವೆ. ಈ ಮೀನುಗಳು ತಾವು ಬೆಳೆಯುತ್ತಾ ಇತರೆ ಪ್ರಭೇದದ ಮೀನುಗಳಿ ಹಾನಿ ಮಾಡುತ್ತಿವೆ.