Read It | ಫೋನ್ ನೋಡ್ಕೊಂಡು ಊಟ ಮಾಡೋ ಅಭ್ಯಾಸ ನಿಮಗಿದ್ಯಾ? ಇವತ್ತೇ ನಿಲ್ಲಿಸಿ ಬಿಡಿ

ಇಂದಿನ ದಿನಗಳಲ್ಲಿ ಊಟದ ತಟ್ಟೆ ಮುಂದೆ ಇದ್ದರೂ ಕಣ್ಣುಗಳು ಮೊಬೈಲ್ ಸ್ಕ್ರೀನ್ ಮೇಲೆ ಅಂಟಿಕೊಂಡಿರೋದು ಸಾಮಾನ್ಯ. “ಒಂದು ರೀಲ್ ನೋಡಿ, ಒಂದು ಮೆಸೇಜ್ ರಿಪ್ಲೈ ಮಾಡಿ” ಅಂತ ಶುರುವಾಗೋ ಅಭ್ಯಾಸ, ನಿಧಾನವಾಗಿ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಊಟ ಅನ್ನೋದು ಕೇವಲ ಹೊಟ್ಟೆ ತುಂಬಿಸೋ ಕ್ರಿಯೆ ಅಲ್ಲ; ಅದು ದೇಹ–ಮನಸ್ಸಿನ ಸಮತೋಲನ ಕಾಯ್ದುಕೊಳ್ಳೋ ಸಮಯ. ಆದರೆ ಫೋನ್ ನೋಡುತ್ತಾ ಊಟ ಮಾಡುವುದರಿಂದ ಆ ಅರಿವು ನಶಿಸುತ್ತಿದೆ.