ನಮಗೆ ನಮ್ಮ ಮೊಬೈಲ್ ಗಿಂತ ನಮ್ಮ ಫ್ರೆಂಡ್ಸ್ ಗಳ ಫೋನ್ ಗಳೇ ಇಷ್ಟ ಆಗೋದು. ಅದರಲ್ಲೇನೋ ವಿಶೇಷವಿದೆ. ಕ್ಯಾಮರಾ, ಫಾಂಟ್ ಹೀಗೆ.. ಒಂದಲ್ಲಾ ಒಂದು ನಮ್ಮ ಮೊಬೈಲ್ ಗಿಂತ ಅವರ ಮೊಬೈಲ್ ಆಕರ್ಷಕವಾಗಿರುತ್ತೆ.. ಇನ್ನು ಮುಂದೆ ನಿಮ್ಮ ಮೊಬೈಲ್ ಅನ್ನೇ ಸ್ಮಾರ್ಟ್ ಆಗಿಸಿ… ಫ್ರೆಂಡ್ಸ್ ಗಳಿಂದ ಭೇಷ್ ಎನಿಸಿಕೊಳ್ಳಿ..
ಬ್ಯಾಕ್ ಕೇಸ್: ಮೊದಲಿಗೆ ನಿಮ್ಮ ಮೊಬೈಲ್ ನ ಬ್ಯಾಕ್ ಕೇಸ್ ಯಾವ ಬಣ್ಣದ್ದು, ಯಾವ ಡಿಸೈನ್ ಇರುವುದನ್ನು ಬಳಸುತ್ತೀರ ಅನ್ನುವುದರ ಕಡೆ ಗಮನ ಕೊಡಿ. ಇದರಿಂದ ನಿಮ್ಮ ಫ್ರೆಂಡ್ಸ್ ಗೆ ನಿಮ್ಮ ಮೊಬೈಲ್ ಆಟ್ರ್ಯಾಕ್ಟ್ ಆಗುತ್ತದೆ.
documents ಡಿಜಿಟಲೀಕರಿಸಿ: ನಿಮ್ಮ ಆಧಾರ್, ಪ್ಯಾನ್ ಹಾಗೂ ಇದರೆ ಪರವಾನಗಿಗಳನ್ನು ಮೊಬೈಲ್ ನಲ್ಲೇ ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ. ಇದು ನಿಮ್ಮನ್ನು ಸ್ಮಾರ್ಟ್ ಎಂದು ತಿಳಿಸುತ್ತದೆ.
ವೆದರ್ ಅಲರ್ಟ್: ನೀವು ಫ್ರೆಂಡ್ಸ್ ಜೊತೆ ಟ್ರಿಪ್ ಹೋಗುವಾಗ ಪ್ಲ್ಯಾನ್ ಮಾಡೋಕೆ ಬೇಕಿರೋದು ವೆದರ್ ರಿಪೋರ್ಟ್. ನೀವು ಎಲ್ಲಿ ಹೋಗಲು ಬಯಸುತ್ತೀರೋ ಆ ಜಾಗದಲ್ಲಿನ ಹವಾಮಾನವನ್ನು ಮೊಬೈಲ್ ನಲ್ಲೇ ನೋಡಿ ಬಿಡಿ.
ಡಿಫರೆಂಟ್ ಕೀಲಿಮಣೆ: ಹೌದು ಈಗಿನ ಕಾಲದಲ್ಲಿ ಬಣ್ಣ ಬಣ್ಣದ ಕೀಬೋರ್ಡ್ ಆಪ್ಷನ್ಸ್ ಬಂದಿದೆ. ನೀವು ನಿಮ್ಮ ಮೊಬೈಲ್ ಹಾಗೂ ಟೇಸ್ಟ್ ಗೆ ತಕ್ಕಂತೆ ಯಾವುದಾದರೂ ಒಂದು ಡಿಫರೆಂಟ್ ಆಗಿರೋ ಕೀಬೋರ್ಡ್ ಬಳಸಿ.
ಏರೋಪ್ಲೇನ್ ಮೋಡ್: ಎಲ್ಲರೂ ಮೊಬೈಲ್ ಬೇಗ ಚಾರ್ಜ್ ಆಗೋದಿಲ್ಲ ಅಂತ ಬೇಸರವಾಗಿದ್ದಾಗ ನೀವು ನಿಮ್ಮ ಮೊಬೈಲ್ ಅನ್ನು ಏರೋಪ್ಲೇನ್ ಮೋಡ್ ನಲ್ಲಿ ಹಾಕಿ ಚಾರ್ಜ್ ಗೆ ಇಡಿ.
RAM ಫಾಸ್ಟ್ ಇರಲಿ: ನಿಮ್ಮ ಮೊಬೈಲ್ ಫಾಸ್ಟ್ ಆಗಿ ಕೆಲಸ ಮಾಡಬೇಕು ಅಂದರೆ ಅದಕ್ಕೆ RAM ಹೆಚ್ಚಾಗಿ ಕೆಲಸ ಮಾಡಬೇಕು. ಹಾಗಾಗಿ ಮೊಬೈಲ್ ನಲ್ಲಿರುವ ಅನಗತ್ಯ ಆಪ್ ಗಳನ್ನು ಡಿಲೀಟ್ ಮಾಡಿ RAM ಫಾಸ್ಟ್ ಮಾಡಿಕೊಳ್ಳಿ.