HEALTH | ಎಷ್ಟುಹೊತ್ತಿಗೆ ವಾಕ್‌ ಮಾಡಿದ್ರೆ ಉತ್ತಮ ನಿಮಗೆ ಗೊತ್ತೇ?

ವಾಕಿಂಗ್‌ ಎಂಬುದು ಒಂದು ಟ್ರೆಂಡ್‌ ಆಗಿದೆ. ಕೆಲವರು ಮುಂಜಾನೆ ವಾಕ್‌ ಮಾಡಿದ್ರೆ ಇನ್ನು ಕೆಲವರು ಸಂಜೆ, ಮತ್ತೂ ಕೆಲವರು ರಾತ್ರಿ ವಾಕ್‌ಗೆ ಮೊರೆ ಹೋಗುತ್ತಿದ್ದಾರೆ. ಅತಿಯಾದ ಬೊಜ್ಜು ಕರಗಿಸಲು ವಾಕ್‌ ಮಾಡುವುದು ಉತ್ತಮ ಎಂಬ ನಂಬಿಕೆ ಹಲವರದ್ದು. ಇಂದಿನ ಜೀವನ ಶೈಲಿ, ಆಹಾರ ಶೈಲಿಯಿಂದ ಮಾನವನ ದೇಹದಲ್ಲಿ ಅತಿಯಾದ ಬೊಜ್ಜು ಸಂಗ್ರಹವಾಗುತ್ತಿದ್ದು, ಇದನ್ನು ಕರಗಿಸಿ ದೇಹಾರೋಗ್ಯ ಹೆಚ್ಚಿಸಲು ವಾಕಿಂಗ್‌ ಮೊರೆಹೋಗುವುದು ಸಾಮಾನ್ಯವಾಗಿದೆ. ಸಿಟಿಗಳಲ್ಲಿ ಇದೊಂದು ʻಪ್ರಿಸ್ಟೀಜ್‌ʼಕೂಡಾ ಹೌದು.

ಹಾಗಾದ್ರೆ ದೇಹಾರೋಗ್ಯ ವೃದ್ಧಿಯೊಂದಿಗೆ, ದೇಹದ ಬೊಜ್ಜು ಕರಗಿಸಲು ಯಾವ ವಾಕ್‌ ಹೆಚ್ಚು ಸೂಕ್ತ ನೋಡೋಣವೇ?
ಏನು ಪ್ರಯೋಜನ: ದೇಹದ ತೂಕ ಕಡಿಮೆ ಮಾಡಿಕೊಳ್ಳಲು, ಆರೋಗ್ಯ ವೃದ್ದಿಸಲು ವಾಕ್‌ ಉತ್ತಮ ಪರಿಹಾರ. ಇದರಿಂದ ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ. ನಡಿಗೆ ಎಂಬುದು ಒಂದು ಅದ್ಭುತವಾದದ್ದು. ಬೊಜ್ಜು ಕರಗಿಸುವ ದೃಷ್ಟಿಯಿಂದ ನಡಿಗೆಗೆ ಮೊರೆಹೋಗುವವರು ನೀವಾಗಿದ್ದರೆ ಈ ಅಂಶವನ್ನಂತೂ ಗಮನದಲ್ಲಿರಿಸುವುದು ಅತೀ ಅಗತ್ಯ. ಮುಂಜಾನೆಯ ವಾಕ್‌ಗಿಂತ ಸಂಜೆಯ ನಡಿಗೆ ಬೊಜ್ಜು ಕರಗಿಸುವ ದೃಷ್ಟಿಯಿಂದ ಅತ್ಯುತ್ತಮ ಎಂಬುದು ಸಂಶೋಧನೆಗಳಿಂದ ದೃಢವಾಗಿದೆ.

ದೈನಂದಿನ ಒತ್ತಡ ನಿವಾರಣೆಯ ದೃಷ್ಟಿಯಿಂದಲೂ ಸಂಜೆಯ ನಡಿಗೆ ದೇಹಕ್ಕೆ ಬಹು ಅನುಕೂಲ. ಜೀರ್ಣಕ್ರಿಯೆ ಉತ್ತಮವಾಗುವುದರ ಜೊತೆಗೆ ಅನೇಕ ಲಾಭಗಳಿವೆ. ಸಂಜೆಯ ವೇಳೆಗೆ ಹೆಚ್ಚು ನಡೆಯುವುದು ಉತ್ತಮ ಎಂಬುದು ಸಂಶೋಧನೆಗಳ ಮೂಲಕ ದೃಢವಾಗಿದೆ. ಆರಂಭದಲ್ಲಿ ಅರ್ಧಗಂಟೆಯ ನಡಿಗೆಯೆಂದು ಪ್ರಾರಂಭಿಸಿ ನಿಧಾನವಾಗಿ ಹೆಚ್ಚಿಸುವುದು ಸೂಕ್ತ. ಇದರಿಂದ ದೇಹಕ್ಕೆ ವ್ಯಾಯಾಮದ ಜೊತೆಗೆ ಉಲ್ಲಾಸವೂ ಲಭಿಸುವುದು. ಜೊತೆಗೆ ದೇಹದ ತೂಕವೂ ನಷ್ಟವಾಗಿ ಆರೋಗ್ಯ ವೃದ್ಧಿಯಾಗುತ್ತದೆ. ನಡೆಯುತ್ತಿರುವ ವೇಳೆಗೆ ಸುಸ್ತಾದಲ್ಲಿ ಸ್ವಲ್ಪ ವಿರಾಮ ತೆಗೆದುಕೊಳ್ಳಬಹುದು. ಆಳವಾದ ಉಸಿರು ತೆಗೆದುಕೊಂಡು ಸುಧಾರಿಸಿ ಮತ್ತೆ ನಡಿಗೆ ಮುಂದುವರಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!