Tuesday, June 28, 2022

Latest Posts

ಪ್ರಧಾನಿ ಮೋದಿಯವರ ‘ಮನ್​ ಕಿ ಬಾತ್’ ನಿಂದ ಕೇಂದ್ರದ ಬೊಕ್ಕಸಕ್ಕೆ ಹರಿದು ಬಂದ ಹಣವೆಷ್ಟು ಗೊತ್ತಾ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

2014ರಲ್ಲಿ ಶುರುವಾದ ಪ್ರಧಾನಿ ನರೇಂದ್ರ ಮೋದಿಯವರ ಮನ್​ ಕಿ ಬಾತ್ ಇಲ್ಲಿಯವರೆಗೆ ಸುಮಾರು 31 ಕೋಟಿ ರೂಪಾಯಿ (30,80,91,225)ಆದಾಯ ಗಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್​ ಸಿಂಗ್ ಠಾಕೂರ್​, ಪ್ರಧಾನಿ ನರೇಂದ್ರ ಮೋದಿಯವರ ಮನ್​ ಕೀ ಬಾತ್​ ದೂರದರ್ಶನ್​ ಮತ್ತು ಆಲ್​ ಇಂಡಿಯಾ ರೇಡಿಯೋದ ಹಲವು ಚಾನಲ್​ಗಳಲ್ಲಿ ಪ್ರಸಾರವಾಗುತ್ತದೆ. 2014ರಿಂದ ಇಲ್ಲಿಯವರೆಗೆ ಪ್ರಸಾರ್ ಭಾರತಿ ತನ್ನ ಆಲ್​ ಇಂಡಿಯಾ ರೇಡಿಯೋ, ದೂರದರ್ಶನ ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳ ಮೂಲಕ ಒಟ್ಟು 78 ಆವೃತ್ತಿಗಳನ್ನು ಪ್ರಸಾರ ಮಾಡಿದೆ. ಈಗಂತೂ 23 ಭಾಷೆ, 29 ಉಪಭಾಷೆಗಳಲ್ಲೂ ಮನ್​ ಕೀ ಬಾತ್​ ಪ್ರಸಾರವಾಗುತ್ತಿದೆ ಎಂದು ತಿಳಿಸಿದರು.
ಪ್ರಸಾರ ಭಾರತಿ ತನ್ನ ಹಿಂದಿ ಮತ್ತು ವಿವಿಧ ಭಾಷೆಗಳ ಡಿಡಿ ಚಾನೆಲ್​ಗಳ ಮೂಲಕ ಮನ್​ ಕೀ ಬಾತ್​ನ ದೃಶ್ಯೀಕೃತ ಆವೃತ್ತಿಗಳನ್ನೂ ಪ್ರಸಾರ ಮಾಡುತ್ತಿದೆ. ಆಲ್​ ಇಂಡಿಯಾ ರೇಡಿಯೋ ಮತ್ತು ದೂರದರ್ಶನಗಳ ಹೊರತಾಗಿಯೂ ಈ ಕಾರ್ಯಕ್ರಮವನ್ನು ದೇಶದಲ್ಲಿ ಸುಮಾರು 91 ಖಾಸಗಿ ಸೆಟಲೈಟ್​ ಟಿವಿ ಚಾನಲ್​ಗಳು, ಕೇಬಲ್​, ಡಿಟಿಎಚ್​ ಪ್ಲ್ಯಾಟ್​ಫಾರಂಗಳು ಪ್ರಸಾರ ಮಾಡುತ್ತಿವೆ. ಅದರೊಂದಿಗೆ iOS, ಆಯಂಡ್ರಾಯ್ಡ್ ಮೊಬೈಲ್​ ಬಳಕೆದಾರರು ನ್ಯೂಸ್ ಆನ್​ ಏರ್​ ಮೂಲಕ ಅಥವಾ ಪ್ರಸಾರ ಭಾರತಿಯ ಯೂಟ್ಯೂಬ್​ ಚಾನಲ್​ಗಳ ಮೂಲಕ ಮನ್​ ಕೀ ಬಾತ್ ಕೇಳುತ್ತಿದ್ದಾರೆ ಎಂದು ಅನುರಾಗ್​ ಠಾಕೂರ್​ ಮಾಹಿತಿ ನೀಡಿದರು.
ಟಿವಿ ಚಾನೆಲ್​ಗಳ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (BARC-ಬಾರ್ಕ್)ಯ ಡಾಟಾ ಅನ್ವಯ, ಮನ್​ ಕೀ ಬಾತ್​ ಕಾರ್ಯಕ್ರಮದ ವೀಕ್ಷಕರ ಸಂಖ್ಯೆ 2018-2020ರ ಅವಧಿಯಲ್ಲಿ ಅಂದಾಜು 6 ಕೋಟಿಯಿಂದ 14.35 ಕೋಟಿಗೆ ಏರಿಕೆಯಾಗಿದೆ.
ಈ ಕುರಿತು ಪ್ರತಿವರ್ಷದ ಅಂಕಿಅಂಶ ನಿಡಿರುವ ಠಾಕೂರ್​, 2014-15ರಲ್ಲಿ 1.16 ಕೋಟಿ, 2015-16ರಲ್ಲಿ 2.18 ಕೋಟಿ, 2016-17ರಲ್ಲಿ 5.14, 2017-18ರಲ್ಲಿ 10.64 ಕೋಟಿ, 2018-19ರಲ್ಲಿ 7.47 ಕೋಟಿ, 2019-20ರಲ್ಲಿ 1.56 ಕೋಟಿ, 2020-21ರಲ್ಲಿ 1.02 ಕೋಟಿ ಆದಾಯ ಸೇರಿ ಒಟ್ಟು 30.80 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಹೇಳಿದ್ದಾರೆ. ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಪ್ರಕಾರ 2018ರಲ್ಲಿ ಆರು ಕೋಟಿಯಿದ್ದ ಪ್ರೇಕ್ಷಕರ ಸಂಖ್ಯೆ 2020ರ ವೇಳೆಗೆ 14.35 ಕೋಟಿಗೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss