ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್‌ನ ಐದು ಜನಪ್ರಿಯ ಗ್ಯಾರೆಂಟಿಗಳನ್ನು ಜಾರಿಗೆ ತರ‍್ತಾ ಇರೋ ಸಿದ್ದರಾಮಯ್ಯ ಸರ್ಕಾರಕ್ಕೆ ಇದು ಹೊರೆಯಾಗೋದಿಲ್ವಾ? ಇದಕ್ಕೆಲ್ಲಾ ಎಷ್ಟು ಖರ್ಚಾಗಲಿದೆ, ಈ ಯೋಜನೆ ಜಾರಿಗೆ ಹಣ ಎಲ್ಲಿಂದ ಬರಲಿದೆ ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ಐದು ಗ್ಯಾರೆಂಟಿಗಳ ಜಾರಿಗೆ ಬರೋಬ್ಬರಿ 59,000 ಕೋಟಿ ರೂ. ವಾರ್ಷಿಕ ವೆಚ್ಚವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಿಂದೆ ಕೂಡ ಅನ್ನಭಾಗ್ಯ, ಕ್ಷೀರಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್ ತೆರೆದು ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದೆವು. ಈಗಲೂ ಕೂಡ ಗ್ಯಾರೆಂಟಿಗಳ ಮೂಲಕ ಪ್ರತಿ ಮನೆ ತಲುಪುತ್ತಿದ್ದೇವೆ ಎಂದಿದ್ದಾರೆ.
ಈ ಗ್ಯಾರೆಂಟಿಗಳಿಗೆ ಹಣ ಎಲ್ಲಿಂದ ಬರಲಿದೆ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಅಂದಾಜು ವೆಚ್ಚದ ಬಗ್ಗೆಯಷ್ಟೇ ಸಿಎಂ ಮಾಹಿತಿ ನೀಡಿದ್ದು, ಹೇಳಿದಂತೆ ಮಾಡುವ ಸರ್ಕಾರ ನಮ್ಮದು, ಮಧ್ಯಮವರ್ಗ ಹಾಗೂ ಬಡವರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ಯಾವುದೇ ಅಡೆತಡೆಗಳಿಲ್ಲದೆ ಕಾರ್ಯನಿರ್ವಹಿಸುವಂತೆ ಮಾಡುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.