Wednesday, August 17, 2022

Latest Posts

ಬಿಗ್​ಬಾಸ್ ಸೀಸನ್​ 15ರ ನಿರೂಪಣೆಗೆ ಸಲ್ಮಾನ್ ಖಾನ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕಿರುತರೆಯ ಬಹುಬೇಡಿಕೆಯ ನಟ ಸಲ್ಮಾನ್ ಖಾನ್ ನಿರೂಪಣೆಯ ಬಿಗ್​ಬಾಸ್ ಸೀಸನ್ 15ರ ಸಂಭಾವನೆ ಕೇಳಿ ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳೋದು ಗ್ಯಾರೆಂಟಿ.

ಸಲ್ಮಾನ್ ಖಾನ್ ತಮ್ಮ ಚಿತ್ರಗಳಿಗೆ ಬಹುದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ. ಇನ್ನು ಹಿಂದಿಯ ಜನಪ್ರಿಯ ರಿಯಾಲಿಟಿ ಶೋ, ಬಿಗ್​ಬಾಸ್ ನಿರೂಪಣೆ ಮಾಡುವುದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಿರಬಹುದೆಂಬ ಕುತೂಹಲ ಪ್ರತಿಯೊಬ್ಬರಿಗೂ ಇದೆ. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.

ಸಲ್ಲಿ ಈ ಬಾರಿಯ ಬಿಗ್​ಬಾಸ್ 15ರ ಸಂಚಿಕೆಯ 14 ವಾರಗಳ ಕಾರ್ಯಕ್ರಮಕ್ಕಾಗಿ ಬರೋಬ್ಬರಿ 350 ಕೋಟಿಯನ್ನು ಪಡೆಯಲಿದ್ದಾರಂತೆ. ‘ಲೆಟ್ಸ್ ಒಟಿಟಿ’ ಈ ಬಗ್ಗೆ ವರದಿ ಮಾಡಿದೆ.  ಕೆಲವರು ಈ ಸಂಗತಿ ಕೇಳಿ ಬೆಚ್ಚಿ ಬಿದ್ದರೆ ಇನ್ನು ಕೆಲವರು ಸಲ್ಮಾನ್ ವರ್ಚಸ್ಸಿಗೆ ಈ ಮೊತ್ತ ಕಡಿಮೆಯೇನಲ್ಲ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!