ಪ್ರಧಾನಿ ಮೋದಿಯಿಂದ ಉದ್ಘಾಟನೆಗೆ ಸಿದ್ದವಾದ ಚೆನ್ನೈ ವಿಮಾನ ನಿಲ್ದಾಣ ಹೇಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:


ಚೆನ್ನೈ ವಿಮಾನ ನಿಲ್ದಾಣ ಹೊಸ ಬದಲಾವಣೆಯೊಂದಿಗೆ ಉದ್ಘಾಟನೆಗೆ ಸಿದ್ದವಾಗಿದ್ದು, ಭವಿಷ್ಯದ ಸಂಚಾರ ದಟ್ಟಣೆ, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬೇಕಾದ ವ್ಯವಸ್ಥೆ ಮತ್ತು ಪರಿಸರದ ಆಧಾರದ ಮೇಲೆ ವಿಮಾನ ನಿಲ್ದಾಣದ ವಿಸ್ತರಣೆ ಕಾರ್ಯಗಳನ್ನು ಕೈಗೊಳ್ಳಲಾಯಿತು.


ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ಮತ್ತು 3 ಅನ್ನು ಕೆಡವಲಾಗಿದ್ದು, ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ನಿರ್ಮಿಸಲಾಗಿದೆ. 2,20,972 ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಟರ್ಮಿನಲ್ ವಾರ್ಷಿಕ 3.5 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ.


ನಾನಾ ರೀತಿಯ ಹೊಸತನದಿಂದ ಕೂಡಿದ ಚೆನ್ನೈ ವಿಮಾನ ನಿಲ್ದಾಣದ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಅನ್ನು ಏಪ್ರಿಲ್‌ 8 ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

ಹೊಸ ವಿಮಾನ ನಿಲ್ದಾಣದ ನೆಲ ಮಹಡಿಯಲ್ಲಿ ರಂಗೋಲಿಯಂಥ ವಿನ್ಯಾಸಗಳನ್ನು ನೆಲದ ಮೇಲೆ ಬಹಳ ದೊಡ್ಡ ಪ್ರಮಾಣದಲ್ಲಿ ಬಿಡಿಸಲಾಗಿದೆ.ತಮಿಳು ಭಾಷೆಯ ಶ್ರೇಷ್ಠತೆಯನ್ನು ತೋರಿಸಲು ತಮಿಳು ಸಂಗೀತ, ನೃತ್ಯ ಮತ್ತು ನಾಟಕವನ್ನು ಚಿತ್ರಿಸುವ ವರ್ಣಚಿತ್ರಗಳನ್ನು ಗೋಡೆಗಳ ಮೇಲೆ ಬರೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!