Thursday, August 18, 2022

Latest Posts

ನಿಮ್ಮ ಗರ್ಭಿಣಿ ಕಲಿಗ್ ಹೇಗೆ ಕೇರ್ ಮಾಡ್ಬೇಕು ಗೊತ್ತಾಗ್ತಿಲ್ವಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ…

ಹತ್ತಾರು ಜನ ಕೆಲಸ ಮಾಡುವ ಕಚೇರಿಗಳಲ್ಲಿ ಸಾಮಾನ್ಯವಾಗಿ ಒಬ್ಬರಲ್ಲ ಒಬ್ಬರು ಗರ್ಭಿಣಿ ಸಹೋದ್ಯೋಗಿಗಳು ಇದ್ದೇ ಇರುತ್ತಾರೆ. ಆದರೆ ಅವರನ್ನಾ ಹೇಗೆ ನೋಡ್ಕೋಬೇಕು, ಯಾವ ರೀತಿ ಕೇರ್ ಮಾಡ್ಬೇಕು ಅನ್ನೋ ಬಗ್ಗೆ ತುಂಬಾ ಜನರಿಗೆ ಗೊತ್ತಿರೋದಿಲ್ಲ. ಅಂತಹವರಿಗೆ ಇಂದಿನ ಲೇಖನದಲ್ಲಿ ಬರೆದಿರುವ ಟಿಪ್ಸ್ ಬಹಳ ಸಹಾಯಕಾರಿಯಾಗಲಿದೆ.

 

ನಿಮ್ಮ ಗರ್ಭಿಣಿ ಕಲಿಗ್ ಹೀಗೆ ಕೇರ್ ಮಾಡಿ..

  • ಗರ್ಭಿಯರಿಗೆ ಹಸಿವು ಜಾಸ್ತಿ. ಪ್ರತಿ 2 ಗಂಟೆಗೊಮ್ಮೆ ಹಣ್ಣು, ಡ್ರೈ ಫ್ರುಟ್ಸ್, ಮೊಳಕೆ ಕಾಳು ಏನಾದರು ಆರೋಗ್ಯಯುತ ಆಹಾರ ತಿನ್ನಲು ನೆನಪಿಸುತ್ತಿರಿ.
  • ಕೆಲವು ಗರ್ಭಿಣಿಯರಿಗೆ ಪರ್ಫ್ಯೂಮ್, ಒಗ್ಗರೆ, ಊದಿನ ಬತ್ತಿ ಸೇರಿದಂತೆ ಅತಿಯಾದ ಪರಿಮಳಗಳು ಹಿಡಿಸುವುದಿಲ್ಲ. ವಾಂತಿ ಬಂದಂತಾಗುತ್ತದೆ. ನಿಮ್ಮ ಆಫೀಸ್ ನಲ್ಲಿಯೂ ಈ ರೀತಿ ಪರಿಮಳಗಳು ಹಿಡಿಸದ ಗರ್ಭಿಣಿಗಳಿದ್ದರೆ ಈ ಬಗ್ಗೆ ಕೇರ್ ಮಾಡಿ.
  • ಲಿಫ್ಟ್ ವ್ಯವಸ್ಥೆ ಇಲ್ಲದೇ ಮೆಟ್ಟಿಲು ಏರಿಯೇ ಕಚೇರಿ ಬರಬೇಕಾದ ಪರಿಸ್ಥಿತಿ ಇದ್ದರೆ, ಆಕೆ ಮೆಟ್ಟಿಲು ಹತ್ತುವಾಗ ಜೊತೆಯಲ್ಲಿರಿ.
  • ತುಂಬಾ ಕೆಲಸದ ಒತ್ತಡ ನೀಡಬೇಡಿ.
  • ಪದೇ ಪದೇ ನೀರು ಕುಡಿಯಲು ಜ್ಞಾಪಿಸಿ. ಏಕೆಂದರೆ ಸಾಮಾನ್ಯರಿಗಿಂತ ಗರ್ಭಿಣಿಯರು ಹೆಚ್ಚು ನೀರು ಸೇವಿಸಬೇಕು.
  • ಸಾಧ್ಯವಾದಲ್ಲಿ ಗರ್ಭಿಣಿಯರಿರುವ ಕಚೇರಿಯಲ್ಲಿ ಎಸಿಗಿಂತ ಫ್ಯಾನ್ ಹೆಚ್ಚು ಬಳಸಿ. ಎಸಿ ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ.
  • ಸಮಯಕ್ಕೆ ಸರಿಯಾಗಿ ಊಟ ಮಾಡಲು ಜ್ಞಾಪಿಸುತ್ತಿರಿ.
    ಗಂಟೆಗೊಮ್ಮೆ ಕನಿಷ್ಠ ನೂರು ಹೆಜ್ಜಾಯಾದರೂ ಓಡಾಡುಲು ನೆನಪಿಸಿರಿ.
  • ಆದಷ್ಟು ಎಲ್ಲ ಸಹೋದ್ಯೋಗಿಗಳು ಸಾಫ್ಟ್ ಆಗಿ ಮಾತನಾಡಿಸಿ. ಅವರು ಕಚೇರಿಯಲ್ಲಿ ಖುಷಿಯಿಂದ ಇರುವಂತ ವಾತಾವರಣ ನಿರ್ಮಿಸಿಕೊಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!