ಕಾರ್ಬೈಡ್ ಬಳಕೆ ಮಾವಿನ ಹಣ್ಣನ್ನು ಪತ್ತೆ ಮಾಡುವುದು ಹೇಗೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಸಿಗೆಯಲ್ಲಿ ಮಾವಿಗೆ ಹೆಚ್ಚಿನ ಬೇಡಿಕೆ ಈ ಋತುವಿನಲ್ಲಿ ವಿವಿಧ ಬಗೆಯ ಮಾವಿನ ಹಣ್ಣು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ಮಾವಿನ ಹಣ್ಣು ನೈಸರ್ಗಿಕವಾಗಿ ಮಾಗಿದ ಹಣ್ಣಲ್ಲ. ಒಂದು ಕಾಲದಲ್ಲಿ ಯಾವುದೇ ಕಾಯಿ ಸ್ವಾಭಾವಿಕವಾಗಿ ಹಣ್ಣಾದ ನಂತರವೇ ಮಾರಾಟವಾಗುತ್ತಿದ್ದವು. ಆದರೆ ಈಗ ಬಹುತೇಕ ಮಾರುಕಟ್ಟೆಯಲ್ಲಿ ಕಾರ್ಬೈಡ್ ಬಳಸಿ ಕೊಯ್ಲು ಮಾಡಿದ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ.

ಕಾರ್ಬೈಡ್ ಬಳಸಿ ಕೊಯ್ಲು ಮಾವಿನ ಹಣ್ಣಿನ ಕೆಲ ಭಾಗ ಹಸಿರು, ಕೆಲ ಭಾಗ ಹಳದಿ ಬಣ್ಣದಲ್ಲಿರುತ್ತದೆ. ಅದೇ ನೈಸರ್ಗಿಕವಾಗಿ ಮಾಗಿದ ಹಣ್ಣುಗಳು ಸಂಪೂರ್ಣ ಹಳದಿ ಹಾಗೂ ಕೆಂಪು ಬಣ್ಣದಿಂದ ಕೂಡಿರುತ್ತದೆ. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣನ್ನು ಒತ್ತಿದರೆ ಅದು ಮೃದುವಾಗುತ್ತದೆ. ಹಣ್ಣಿನ ತೊಟ್ಟಿನಿಂದ ಉತ್ತಮ ಪರಿಮಳ ಬರುತ್ತಿರುತ್ತದೆ.

ಕಾರ್ಬೈಡ್ ಬಳಸಿ ಕೊಯ್ಲು ಮಾಡಿದ ಮಾವಿನೊಳಗೆ ಹೆಚ್ಚು ಉಳಿ ಅಂಶ ಇರುತ್ತದೆ. ನೈಸರ್ಗಿಕವಾಗಿ ಮಾಗಿದ ಹಣ್ಣುಗಳಲ್ಲಿ ರಸ ಹೆಚ್ಚಾಗಿದ್ದು, ತುಂಬಾ ಸಿಹಿಯಾಗಿರುತ್ತದೆ. ಕಾರ್ಬೈಡ್ ಬಳಸಿ ಕೊಯ್ಲು ಮಾಡಿದ ಹಣ್ಣುಗಳು ನೀರಿನಲ್ಲಿ ತೇಲುತ್ತವೆ. ನೈಸರ್ಗಿಕ ಹಣ್ಣುಗಳು ನೀರಿನಲ್ಲಿ ಮುಳುಗುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!