Wednesday, August 10, 2022

Latest Posts

ಒಂದು ತಿಂಗಳಲ್ಲಿ ನಂಜನಗೂಡಿನ ನಂಜುಂಡೇಶ್ವರನಿಗೆ ಹರಿದು ಬಂದ ಆದಾಯ ಎಷ್ಟು ಗೊತ್ತಾ?

ಹೊಸದಿಗಂತ ವರದಿ, ಮೈಸೂರು:

ದಕ್ಷಿಣ ಕಾಶಿ ಎಂದು ಹೆಸರಾಗಿರುವ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ನಂಜುಂಡೇಶ್ವರನಿಗೆ ಒಂದೇ ತಿಂಗಳಲ್ಲಿ 1.11 ಕೋಟಿ ರೂ. ಗೂ ಹೆಚ್ಚು ಆದಾಯ ಬಂದಿದೆ.

ಇಂದು ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಹುಂಡಿಗಳಲ್ಲಿನ ಹಣ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ ಒಂದೇ ತಿಂಗಳಲ್ಲಿ ಬರೋಬ್ಬರಿ 1,11,64,033 ರೂ. ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಇಷ್ಟೇ ಅಲ್ಲದೇ 105 ಗ್ರಾಂ ಚಿನ್ನ, 2 ಕೆ.ಜಿ 250 ಗ್ರಾಂ ಬೆಳ್ಳಿ 6 ವಿದೇಶಿ ಕರೆನ್ಸಿ ಕೂಡ ಸಂಗ್ರಹವಾಗಿದೆ. ಚಲಾವಣೆ ಇಲ್ಲದ 1 ಸಾವಿರ ಮುಖ ಬೆಲೆಯ 11 ನೋಟು, 500 ಮುಖಬೆಲೆಯ 87 ನೋಟುಗಳು ಸಹ ಹುಂಡಿಯಲ್ಲಿ ಪತ್ತೆಯಾಗಿದೆ.

ತಹಶೀಲ್ದಾರ್ ಶರ್ಮಿಳಾ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಕಳೆದ ವರ್ಷ ಕೊರೊನಾ ಸಂಕಷ್ಟದಿಂದ ಹಣ ಸಂಗ್ರಹ ಕಡಿಮೆಯಾಗಿತ್ತು. ಇದೀಗ ಅನ್ ಲಾಕ್ ಜಾರಿಯಲ್ಲಿರುವುದರಿಂದ ನಂಜನಗೂಡಿಗೆ ಪ್ರತಿನಿತ್ಯ ಸಾವಿರಾರು ಜನರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ.

ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಆದಾಯ ಕೂಡ ಹೆಚ್ಚಾಗುತ್ತಿದೆ. ಇದರಿಂದಾಗಿ ಕಳೆದ 11 ತಿಂಗಳಿಂದ ನಿಂತುಹೋಗಿದ್ದ ದಾಸೋಹ ವ್ಯವಸ್ಥೆಯೂ ಕಳೆದ 10 ದಿನಗಳಿಂದ ಆರಂಭಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss