Friday, October 7, 2022

Latest Posts

ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯದಿನಗಳಂದು ಧ್ವಜಾರೋಹಣದಲ್ಲಿರೋ ವ್ಯತ್ಯಾಸಗಳು ನಿಮಗೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದೆಲ್ಲೆಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮನೆ ಮಾಡಿದೆ. ಹರ್‌ ಘರ್‌ ತಿರಂಗಾ ಕಾರ್ಯಕ್ರಮದಡಿ ಕೋಟ್ಯಂತರ ಭಾರತೀಯರು ತಮ್ಮ ಮನೆಗಳಲ್ಲಿ ತ್ರಿವರ್ಣ ರಾಷ್ಟ್ರಧ್ವಜವನ್ನು ಹಾರಿಸಿ ದೇಶಭಕ್ತಿಯಲ್ಲಿ ಮಿಂದೆದ್ದು ಭಾರತಾಂಬೆಗೆ ಗೌರವ ಸಲ್ಲಿಸಿದ್ದಾರೆ. ಈ ರಾಷ್ಟ್ರೀಯ ಹಬ್ಬದಾಚರಣೆಯ ಸಂದರ್ಭದಲ್ಲಿ ಅಗಸ್ಟ್‌ 15 ರಂದು ದೇಶದ ಪ್ರಧಾನ ಮಂತ್ರಿಗಳು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ಹಾಗೆಯೇ ಇನ್ನೊಂದು ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವದಂದೂ ಕೂಡ ಧ್ವಜಾರೋಹಣ ನಡೆಸಲಾಗುತ್ತದೆ. ಆದರೆ ಇವೆರಡು ಧ್ವಜಾರೋಹಣ ಪ್ರಕ್ರಿಯೆಯಲ್ಲಿ ಕೊಂಚ ವ್ಯತ್ಯಾಸವಿದೆ. ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಿರೋ ವಿವರಣೆ ಇಲ್ಲಿದೆ ನೋಡಿ

  • ಸ್ವಾತಂತ್ರ್ಯೋತ್ಸವದಂದು ದೇಶದ ಪ್ರಧಾನಮಂತ್ರಿಗಳು ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ದೇಶವು ಪಾಶ್ಚಿಮಾತ್ಯರ ಆಳ್ವಿಕೆಯಿಂದ ಮುಕ್ತವಾದ ಸ್ಮರಣಿಕೆಯಲ್ಲಿ ಈ ಆಚರಣೆ ಮಾಡಲಾಗುತ್ತದೆ.
  • ಆದರೆ ಗಣರಾಜ್ಯೋತ್ಸವದಂದು ಭಾರತದ ರಾಷ್ಟ್ರಪತಿಗಳು ರಾಜಪಥದಲ್ಲಿ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸುತ್ತಾರೆ. ದೇಶವು ಸಂವಿಧಾನವನ್ನು ಅಂಗೀಕರಿಸಿ ಪ್ರಜಾಸತ್ತಾತ್ಮಕ ಗಣರಾಜ್ಯವಾದ ಹಿನ್ನೆಲೆಯಲ್ಲಿ ಈ ಆಚರಣೆ ಮಾಡಲಾಗುತ್ತದೆ. ಅಂದು ದೇಶದ ಸೇನೆಯ ಮಹಾದಂಡನಾಯಕರಾದ ರಾಷ್ಟ್ರಪತಿಗಳು ಸೇನೆಯಿಂದ ಗೌರವ ಸ್ವೀಕರಿಸುತ್ತಾರೆ.
  • ಸ್ವಾತಂತ್ರ್ಯ ಬಂದಾಗ ಭಾರತವಿನ್ನೂ ಗಣರಾಜ್ಯವಾಗಿರಲಿಲ್ಲ. ಹಾಗಾಗಿ ಅಂದು ಪ್ರಧಾನಿಯವರು ಧ್ವಜಾರೋಹಣ ಮಾಡಿದ್ದರು. ಆದರೆ ಗಣರಾಜ್ಯೋತ್ಸವ ಅಂದರೆ ಜನೆವರಿ26 ರಂದು ಭಾರತ ಗಣರಾಜ್ಯವಾಗಿದ್ದು ಭಾರತದ ಮುಖ್ಯಸ್ಥರಾದ ರಾಷ್ಟ್ರಪತಿಗಳು ಧ್ವಜಾರೋಹಣ ನೆರವೇರಿಸುತ್ತಾರೆ.
  • ಧ್ವಜದ ಸ್ಥಾನದಲ್ಲೂ ವ್ಯತ್ಯಾಸವಿದ್ದು ಸ್ವಾತಂತ್ರ್ಯೋತ್ಸವದಂದು ಧ್ವಜವನ್ನು ಮಡಚಿ ಧ್ವಜಸ್ಥಂಬದ ಕೆಳಭಾಗದಲ್ಲಿ ಕಟ್ಟಲಾಗಿರುತ್ತದೆ. ಪ್ರಧಾನಿಗಳು ಅದನ್ನು ಮೇಲೇರಿಸಿ ಹಾರಿಸುತ್ತಾರೆ. ಆದರೆ ಗಣರಾಜ್ಯೋತ್ಸವದಂದು ಧ್ವಜವನ್ನು ಮಡಚಿ ಮೇಲೆಯೇ ಕಟ್ಟಲಾಗಿರುತ್ತದೆ. ಅದನ್ನು ರಾಷ್ಟ್ರಪತಿಗಳು ಅನಾವರಣ ಮಾಡುತ್ತಾರೆ.
  • ಈ ಸಂಪ್ರದಾಯದ ಹಿಂದಿನ ಕಾರಣವೇನೆಂದರೆ ಸ್ವಾತಂತ್ರ್ಯೋತ್ಸವದಂದು ದೇಶವು ಪರಕೀಯರ ಕೈಯಿಂದ ಸಂಪೂರ್ಣವಾಗಿ ಮುಕ್ತವಾಯಿತು. ಆದರೆ ಗಣರಾಜ್ಯೋತ್ಸವದಂದು ಅದಾಗಲೇ ಸ್ವತಂತ್ರಗೊಂಡಿದ್ದ ದೇಶವು ಸಂವಿಧಾನವನ್ನು ಅಂಗೀಕರಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!