ದ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಹೊಸ ಸಿನಿಮಾ ಯಾವುದು ಗೊತ್ತೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಸೆನ್ಸೇಶನ್ ಸೃಷ್ಟಿಸಿದ ಸಿನಿಮಾಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್ ‘ಕೂಡ ಒಂದಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿದ ಸಿನಿಮಾ ಇದಾಗಿದ್ದು, ವಿವೇಕ್ ಅಗ್ನಿಹೋತ್ರಿ ಚಿತ್ರ ನಿರ್ದೇಶಿಸಿದ್ದರು. ಸಿನಿಮಾ ಹಿಟ್ ಆದ ಬಳಿಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ಮುಂದಿನ ಸಿನಿಮಾದಲ್ಲಿ ಯಾವ ಸೂಕ್ಷ್ಮವನ್ನು ಜನರ ಮನಸ್ಸಿಗೆ ತಟ್ಟುವಂತೆ ತೋರಿಸುತ್ತಾರೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದು, ಇದೀಗ ವಿವೇಕ್ ಇದಕ್ಕೆ ಉತ್ತರ ನೀಡಿದ್ದಾರೆ.

ತಮ್ಮ ಮುಂದಿನ ಸಿನಿಮಾ ಬಗ್ಗೆ ವಿವೇಕ್ ಟ್ವೀಟ್ ಮಾಡಿದ್ದು, ಈ ಸಿನಿಮಾ ಕೋವಿಡ್ ಹಾಗೂ ವ್ಯಾಕ್ಸಿನ್ ಕುರಿತದ್ದಾಗಿದೆ. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದೇವೆ. ಕೋವಿಡ್ ಸಮಯದಲ್ಲಿ ಭಾರತ ಹೋರಾಡಿದ, ನೀವು ತಿಳಿಯದ ಯುದ್ಧದ ಕಥೆ ಇದಾಗಿದೆ. ಭಾರತವು ತನ್ನ ವಿಜ್ಞಾನ, ಧೈರ್ಯ ಹಾಗೂ ಮೌಲ್ಯಗಳನ್ನು ಬಳಸಿ ಯುದ್ಧದಲ್ಲಿ ಗೆದ್ದ ನೈಜ ಕಥೆ ಇದಾಗಿದೆ. 2023ರ ಸ್ವಾತಂತ್ರ್ಯೋತ್ಸವದಂದು ಸಿನಿಮಾ ನಿಮ್ಮ ಮುಂದೆ 11 ಭಾಷೆಗಳಲ್ಲಿ ಬರಲಿದೆ ಎಂದು ಹೇಳಿದ್ದಾರೆ.

 

 

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!