spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರಿಗೆ ಆಗಾಗ ಕಾಡುವ Breast Painಗೆ ಕಾರಣ ಏನು ಗೊತ್ತಾ? ಇಲ್ಲಿದೆ ನೋಡಿ

- Advertisement -Nitte

ಮಹಿಳೆಯರಿಗೆ ಹೇಳಿಕೊಳ್ಳಲೂ ಆಗದೆ, ಅನುಭವಿಸೋಕು ಆಗದೆ ಇರುವ ತೊಂದರೆಗಳಲ್ಲಿ ಸ್ತನ ನೋವು ಕೂಡ ಒಂದು. ಇದನ್ನು ಪುರುಷರ ಬಳಿ ಹೇಳೋಕೆ ಮುಜುಗರ ಪಟ್ಟು ಲೇಡಿ ವೈದ್ಯೆಗಾಗಿಯೇ ಕಾಯುತ್ತಾರೆ. ಕೆಲವೊಮ್ಮೆ ಸ್ತನಗಳಲ್ಲಿ ಏನಾದರೂ ನೋವು ಕಾಣಿಸಿದರೆ ಆರೋಗ್ಯ ಹಾಳಾಗಿದೆ ಎಂದು ಭಾವಿಸುತ್ತಾರೆ. ಆದರೆ ಈ ಸಮಸ್ಯೆಗಳು ನಮ್ಮ ಜೀವನದ ದಿನಚರಿ ಕೂಡ ಸ್ತನದ ಆರೋಗ್ಯಕ್ಕೆ ಕಾರಣವಾಗುತ್ತದೆ.. ಏನೆಲ್ಲಾ ಕಾರಣ ಗೊತ್ತಾ?

ಹಾರ್ಮೋನ್ಸ್ ಬದಲಾವಣೆ:
ಸ್ತನಗಳಲ್ಲಿ ನೋವು ಕಾಡುವುದಕ್ಕೆ ಹಾರ್ಮೋನ್ ಬದಲಾವಣೆಯೇ ಮುಖ್ಯ ಕಾರಣವಾಗುತ್ತದೆ. ಸಾಮಾನ್ಯವಾಗಿ ಪೀರಿಯಡ್ಸ್ ಸಮಯದ ಮುಂಚಿತ 3-5ದಿನಗಳ ಅವಧಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಆದಷ್ಟು ಕಾಫಿ, ಹೆಚ್ಚು ಉಪ್ಪು, ಧೂಮಪಾನ, ಫ್ಯಾಟ್ ಅಂಶ ಸೇವನೆ ಕಡಿಮೆ ಮಾಡಬೇಕು.

ಸ್ತನದಲ್ಲಿ ಗಾಯ:
ದೇಹದ ಇತರೆ ಅಂಗಾಂಗಗಳಂತೆ ಸ್ತನಕ್ಕೂ ಕೂಡ ಗಾಯವಾಗುತ್ತದೆ. ಅಪಘಾತವಾದಾಗ ಬಿದ್ದು ಆದ ಗಾಯದಿಂದಲೂ ಸ್ತನದಲ್ಲಿ ನೋವು ಕಾಡುತ್ತದೆ. ಇದರಿಂದ ಕೆಲವೊಮ್ಮೆ ಸ್ತನದಲ್ಲಿ ಊತ, ಸ್ತನ ಗಟ್ಟಿಯಾಗುವುದು ಕೂಡ ಆಗುತ್ತದೆ.

ಸರಿಯಾದ ಬ್ರಾ ಧರಿಸಿ:
ಕೆಲವೊಮ್ಮೆ ಸರಿಯಾದ ಅಳತೆಯ ಬ್ರಾ ಹಾಕಿಕೊಳ್ಳದಿದ್ದರೆ ಸ್ತನ ನೋವು ಕಾಣಿಸಿಕೊಳ್ಳುತ್ತದೆ. ಸರಿಯಾದ ಒಳ ಉಡುಪು ಧರಿಸುವುದರಿಂದ ಸ್ತನಗಳು ಎದೆ ಭಾಗದಲ್ಲಿ ಬೆಂಬಲವಾಗಿರಲು ಬ್ರಾ ಸಹಾಯ ಮಾಡುತ್ತದೆ.

ಸ್ತನ ಸೋಂಕು:
ಎದೆ ಹಾಲು ಉಣಿಸುವ ಮಹಿಳೆಯರಿಗೆ ಸ್ತನದಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ. ಇದರಿಂದ ಎದೆಯಲ್ಲಿ ನೋವು, ಸ್ತನ ಕೆಂಪಗಾಗುವುದು ಹಾಗೂ ಊತ ಕಾಣಿಸಿಕೊಳ್ಳುತ್ತದೆ.

ಎದೆ ಹಾಲು:
ಕೆಲವೊಮ್ಮೆ ಮಗುವಿಗೆ ಎದೆ ಹಾಲು ಕೊಡುವಾಗ ನಿಪ್ಪಲ್ ಗಳಲ್ಲಿ ನೋವು ಕಾಡುತ್ತದೆ.

ಬ್ರೆಸ್ಟ್ ಕ್ಯಾನ್ಸರ್:
ಸ್ತನದಲ್ಲಿ ಉರಿಯೂತ ಸ್ತನ ಕ್ಯಾನ್ಸರ್ ನ ಲಕ್ಷಣಗಳನ್ನು ಉಂಟು ಮಾಡುತ್ತದೆ. ಈ ವೇಳೆ ಸ್ತನಗಳು ಹೆಚ್ಚು ಭಾರ, ನೋವನ್ನುಂಟು ಮಾಡುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss