ತೈಲ ಹಡಗುಗಳ ಟ್ರಾಫಿಕ್‌ ಜಾಮ್‌ ಆಗಿದೆ ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟರ್ಕಿ ಸಮುದ್ರದಲ್ಲೀಗ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು ಲಕ್ಷಾಂತರ ಬ್ಯಾರೆಲ್‌ ಗಳಷ್ಟು ತೈಲ ಹೊತ್ತ ಹಲವು ಹಡಗುಗಳೀಗ ಟ್ರಾಫಿಕ್‌ ಜಾಮ್‌ ನಲ್ಲಿ ಸಿಲುಕಿವೆ. ನಗರಗಳಲ್ಲಿ ಕಾರು ಬಸ್ಸುಗಳ ಟ್ರಾಫಿಕ್‌ ಜಾಮ್‌ ಗೊತ್ತು, ಇದೇನಿದು ಹಡಗುಗಳ ಟ್ರಾಪಿಕ್‌ ಜಾಮ್‌ ಎಂದು ಪ್ರಶ್ನಿಸುತ್ತಿದ್ದೀರಾ? ಅಸಲಿಗೆ ಆದದ್ದಿಷ್ಟು, ಕಝಕ್‌ ತೈಲವನ್ನು ಹೊತ್ತ ಹಲವಾರು ಹಡಗುಗಳೀಗ ಟರ್ಕಿಯ ಸಮುದ್ರದಲ್ಲಿ ಲಂಗರು ಹಾಕಿವೆ. ಕಝಕ್‌ನ ಕಚ್ಚಾ ತೈಲವನ್ನು ಸಾಗಿಸುವ ತೈಲ ಟ್ಯಾಂಕರ್‌ಗಳು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸದಂತೆ ಅವುಗಳನ್ನು ಕಪ್ಪು ಸಮುದ್ರದಲ್ಲಿ ತಡೆ ಹಿಡಿಯಲಾಗಿದೆ. ಹೀಗಾಗಿ ಹಲವಾರು ಹಡಗುಗಳು ಟರ್ಕಿಯ ಸಮುದ್ರದಲ್ಲಿ ಸಿಲುಕಿದ್ದು ಒಂದು ರೀತಿಯ ಟ್ರಾಫಿಕ್‌ ಜಾಮ್‌ ಸೃಷ್ಟಿಯಾಗಿದೆ.

ತೈಲಹಡಗುಗಳಿಗೆ ಸರಿಯಾದ ವಿಮೆ ಒದಗಿಸಲಾಗಿದೆ ಎಂಬುದಕ್ಕೆ ಪುರಾವೆ ನೀಡುವಂತೆ ಟರ್ಕಿ ಸರ್ಕಾರವು ಒತ್ತಾಯಿಸಿದೆ. ಹೀಗಾಗಿ ಹಲವು ಹಡಗುಗಳು ಕಪ್ಪು ಸಮುದ್ರದಲ್ಲೇ ಸಿಲುಕಿದೆ. ಕಳೆದ ವಾರವಷ್ಟೇ ಜಿ-7 ರಾಷ್ಟ್ರಗಳು ರಷ್ಯಾ ತೈಲದ ಮೇಲೆ ಬೆಲೆ ನಿರ್ಬಂಧವನ್ನು ಹೇರಿವೆ. ಇದರ ಅನ್ವಯ 60 ಯುಎಸ್‌ ಡಾಲರ್‌ ಅಥವಾ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ರಷ್ಯಾದ ತೈಲವನ್ನು ಖರೀದಿಸುವ ನಿರ್ಬಂಧ ವಿಧಿಸಲಾಗಿದೆ. ಹೀಗೆ ಖರೀದಿಸಿದರೆ ಮಾತ್ರ ಯುರೋಪಿಯನ್‌ ಸಂಸ್ಥೆಗಳಿಗೆ ರಷ್ಯಾದ ಕಚ್ಚಾ ತೈಲವನ್ನು ಸಾಗಿಸುವ ಟ್ಯಾಂಕರ್‌ಗಳಿಗೆ ವಿಮೆ ಮಾಡಲು ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಡಗುಗಳ ಪೂರ್ಣ ವಿಮೆಯನ್ನು ಟರ್ಕಿ ಸರ್ಕಾರ ಪರಿಶೀಲಿಸುತ್ತಿದೆ. ಆದರೆ ವಿಮಾ ಪೂರೈಕೆದಾರರು ಟರ್ಕಿ ಬೇಡಿಕೆಯಿಟ್ಟಿರುವ ಪತ್ರಗಳನ್ನು ಸದ್ಯಕ್ಕೆ ಪ್ರಕಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದರ ಪರಿಣಾಮವಾಗಿ 18 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಹೊಂದಿರುವ ಕನಿಷ್ಠ 20 ವಾಹಕಗಳು ಬಾಸ್ಫರಸ್ ಮತ್ತು ಡಾರ್ಡನೆಲ್ಲೆಸ್ ಹಡಗು ಜಲಸಂಧಿಗಳ ಮೂಲಕ ಹಾದುಹೋಗಲು ಹಲವಾರು ದಿನಗಳಿಂದ ಕಾಯುತ್ತಿವೆ. ಇವುಗಳಲ್ಲಿ ಬಹುತೇಕ ಹಡುಗಗಳು ಯುರೋಪಿಗೆ ತಲುಪುವ ಗುರಿ ಹೊಂದಿದ್ದು, ಭಾರತದೆಡೆಗೆ ಬರುವ ಹಡಗೂ ಕೂಡ ಇವುಗಳಲ್ಲಿ ಸಿಲುಕಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!