Thursday, August 18, 2022

Latest Posts

ಚಹಾ ತ್ಯಾಜ್ಯದ ಜೋಡಿ ಬಾಳೆಹಣ್ಣಿನ ಸಿಪ್ಪೆ, ವಿಷಕಾರಿಯಲ್ಲದ ಇಂಗಾಲದ ಈ ಸಂಶೋಧನೆ ಗೊತ್ತೇ?

ಹೊಸದಿಗಂತ ಆನ್ಲೈನ್ ಡೆಸ್ಕ್:

ನಾವು ಕುಡಿಯುವ ಚಹಾದ ತ್ಯಾಜ್ಯ, ತಿನ್ನುವ ಬಾಳೆ ಹಣ್ಣಿನ ಸಿಪ್ಪೆ ತಿಪ್ಪೆಗೆಸೆಯಲಷ್ಟೇ ಲಾಯಕಲ್ಲ. ಇದರಿಂದ ವಿಷಕಾರಿಯಲ್ಲದ ಸಕ್ರಿಯ ಇಂಗಾಲ ತಯಾರಿಸಬಹುದು. ವಿಜ್ಞಾನಿಗಳ ತಂಡ ಇಂಥದ್ದೊಂದು ಸಂಶೋಧನೆಯಲ್ಲಿ ಯಶಸ್ವಿಯಾಗಿದೆ.

ಚಹಾ ಎಲೆಯ ರಚನೆಯು ಉತ್ತಮ ಗುಣಮಟ್ಟದ ಸಕ್ರಿಯ ಇಂಗಾಲಕ್ಕೆ ಪರಿವರ್ತನೆಗೊಳ್ಳಲು ಅನುಕೂಲಕರ. ಇದರಲ್ಲಿ ಇಂಗಾಲದ ಪರಮಾಣಗಳು ಸಂಯೋಜಿತಗೊಂಡಿದ್ದು, ಪಾಲಿಫಿನಾಲ್‌ಗಳ ಬಂಧ ಹೊಂದಿವೆ. ಚಹಾವನ್ನು ಬಲವಾದ ಆಮ್ಲ ಮತ್ತು ಧಾತುಗಳು ಬಳಸಿ ಸಕ್ರಿಯ ಇಂಗಾಲವಾಗಿಸಲಾಗುತ್ತದೆ. ಇದು ಉತ್ಪನ್ನವನ್ನು ವಿಷಕಾರಿಯಾಗಿಸುತ್ತದೆ. ಹೊಸದಾಗಿ ಅಭಿವೃದ್ಧಿಪಡಿಸಿದ ಪ್ರಕ್ರಿಯೆಯಲ್ಲಿ ಯಾವುದೇ ವಿಷಕಾರಿ ಏಜೆಂಟ್ ಬಳಕೆ ಮಾಡದಿರುವುದು ವಿಶೇಷ.

ಚಹಾ ತ್ಯಾಜ್ಯಗಳಿಂದ ಸಕ್ರಿಯ ಇಂಗಾಲ ತಯಾರಿಸಲು ಪರ್ಯಾಯ ಸಕ್ರಿಯ ಏಜೆಂಟ್ ಆಗಿ ಬಳಸಿರುವುದು ಬಾಳೆ ಗಿಡದ ಸಾರ. ಅದರಲ್ಲಿರುವ ಆಮ್ಲಜನಕೀಕೃತ ಪೊಟ್ಯಾಶಿಯಂ ಸಂಯುಕ್ತಗಳು ಚಹಾ ತ್ಯಾಜ್ಯದಿಂದ ತಯಾರಿಸಿದ ಇಂಗಾಲವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತವೆ.


ಒಣಗಿದ ಬಾಳೆಹಣ್ಣಿನ ಸಿಪ್ಪೆಗಳನ್ನು ಸುಟ್ಟಾಗ, ಅದರಿಂದ ಬಂದ ಬೂದಿಯ ಕ್ಷಾರೀಯ ಸಾರ ಖಾರ್. ಇದಕ್ಕೆ ಎಲ್ಲ ರೀತಿಯ ಬಾಳೆ ತಳಿ ಉಪಯೋಗಿಸಲು ಬರುವುದಿಲ್ಲ. ಭೀಮ್‌ಕೋಲ್ ತಳಿ ಮಾತ್ರ ಬಳಕೆಯಾಗುತ್ತದೆ. ಭೀಮ್‌ಕೋಲ್ ಕಂಡುಬರುವುದು ಅಸ್ಸಾಂ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಮಾತ್ರ. ಇಂಗಾಲ ಸಕ್ರಿಯಗೊಳಿಸುವ ಪ್ರಕ್ರಿಯೆಯಲ್ಲಿ ಬಳಸಲಾಗುವ ಬಾಳೆ ಗಿಡದ ಸಾರ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗುತ್ತದೆ.

ಈ ಸಂಶೋಧನೆ ಮಾಡಿದ್ದು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಗುವಾಹಟಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸುಧಾರಿತ ಅಧ್ಯಯನ ಸಂಸ್ಥೆ (ಐಎಎಸ್‌ಎಸ್‌ಟಿ) ಮಾಜಿ ನಿರ್ದೇಶಕ ಡಾ. ಎನ್.ಸಿ. ತಾಲೂಕುದಾರ್ ಮತ್ತು ಸಹ ಪ್ರಾಧ್ಯಾಪಕ ದೇವಶಿಶ್ ಚೌಧರಿ. ಈ ಸಂಶೋಧನೆಗೆ ಅವರು ಭಾರತೀಯ ಪೇಟೆಂಟ್ ಕೂಡ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!