Wednesday, August 10, 2022

Latest Posts

ಬೇಸಿಗೆ ಕಾಲದಲ್ಲಿ ಗರ್ಭಿಣಿಯರು ಪಾಲಿಸಲೇ ಬೇಕಾದ ಮುಖ್ಯ ಅಂಶಗಳು ಯಾವವು ಗೊತ್ತಾ? ಇಲ್ಲಿದೆ ನೋಡಿ…

ಬೇಸಿಗೆ ಎಂದರೆ ನೆನಪಾಗುವುದು ಬಿಸಿಲು. ಸಾಮಾನ್ಯರಿಗೇ ಬೇಸಿಗೆಯಲ್ಲಿ ಮನೆಬಿಟ್ಟು ಹೊರ ಬರಲಾಗದು. ಇನ್ನು ಗರ್ಭಿಣಿಯರ ಸ್ಥಿತಿ ಹೇಳತೀರದು. ಗರ್ಭಾವಸ್ಥೆಯಲ್ಲಿ ಎಷ್ಟೇ ಜೋಪಾನವಾಗಿದ್ದರೂ ಸಾಲದು. ಸ್ವಲ್ಪ ಹೆಚ್ಚು ಕಡಿಮೆ ಆದರೂ ನೇರವಾಗಿ ಮಗುವಿನ ಆರೋಗ್ಯದ ಮೇಲೆಯೇ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಗರ್ಭಿಣಿರು ಈ ಅಂಶಗಳನ್ನು ಪಾಲಿಸಲೇ ಬೇಕು.

ದ್ರವ:
ಆದಷ್ಟು ಹೆಚ್ಚು ಹೆಚ್ಚು ನೀರನ್ನು ಸೇವಿಸಿ. ನೀರಿನ ಅಂಶ ಹೆಚ್ಚು ಇರುವಂತಹ ಪಾನೀಯಗಳನ್ನೇ ಸೇವಿಸಿ. ಹಣ್ಣನ್ನು ಹಾಗೆ ಸೇವಿಸುವುದಕ್ಕಿಂತ್ ಜ್ಯೂಸ್ ಮಾಡಿಕೊಂಡು ಸೇವಿಸಿ.

ಪ್ರಯಾಣ:
ಗರ್ಭಿಣಿಯರು ಬೇಸಿಗೆಯಲ್ಲಿ ತಂಪಿನ ವಾತಾವರಣವಿರುವ ಪ್ರದೇಶದಲ್ಲಿಯೇ ಇರಿ. ಬೇಸಿಗೆಯಲ್ಲಿ ಪ್ರಯಾಣ ಮಾಡಬೇಡಿ. ಒಂದೇ ಕಡೆ ಇರಿ.

ಬಟ್ಟೆ:
ಕಾಟನ್ ಬಟ್ಟೆಗಳನ್ನು ಹೆಚ್ಚು ಬಳಸಿ. ದೇಹಕ್ಕೆ ತಂಪಾಗುವ ಬಟ್ಟೆಗಳನ್ನೇ ಗರ್ಭಿಣಿಯರು ಬಳಸ ಬೇಕು. ಬಟ್ಟೆ ಕಂಫರ್ಟ್ ಇಲ್ಲದಿದ್ದರೆ ಮೂಡ್ ಸರಿ ಇರುವುದಿಲ್ಲ.

ಒಳ ಉಡುಪು:
ಗರ್ಭಿಣಿಯರ ದೇಹ ನಿಮಿಷ ನಿಮಿಷಕ್ಕೂ ಬೆಳವಣಿಗೆ ಹೊಂದುತ್ತಿರುತ್ತದೆ. ಲೂಸ್ ಇರುವ ಒಳ ಉಡುಪುಗಳನ್ನು ಬಳಸಿ. ಭಿಗಿ ಬಟ್ಟೆಗಳನ್ನು ಬಳಸಿದರೆ ಹೆಚ್ಚು ಬೆವರುತ್ತದೆ.

ಹೊಟ್ಟೆ:
ಗರ್ಭಿಣಿಯರಿಗೆ ಹೊಟ್ಟೆ ಹೆಚ್ಚು ಬೆವರುತ್ತದೆ. ಬಹಳ ಬೆವರಿದರೆ ಸೆಕೆ ಗುಳ್ಳೆಗಳು ಆಗುತ್ತದೆ. ಹಾಗಾಗಿ ಹೊಟ್ಟೆಯನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

ಫ್ರಿಡ್ಜ್ ನೀರು ಬೇಡ:
ಬಹಳ ಸೆಕೆ ಇದೆ ಎಂದು ಅಪ್ಪಿ ತಪ್ಪಿಯೂ ಫ್ರಿಡ್ಜ್ ಲ್ಲಿ ಇಟ್ಟ ನೀರನ್ನು ಸೇವಿಸಬೇಡಿ. ಫ್ರಿಡ್ಜ್ ಆಹಾರವನ್ನೇ ಸೇವಿಸಬೇಡಿ. ಏಕೆಂದರೆ ಪ್ರಿಡ್ಜ್ ಆಹಾರ ದೇಹಕ್ಕೆ ಒಳ್ಳೆಯದಲ್ಲ.

ಫ್ಯಾನ್:
ಬೇಸಿಗೆಯಲ್ಲಿ ಕೆಲವು ಪ್ರದೇಶದಲ್ಲಿ ಫ್ಯಾನ್ ಇಲ್ಲದಿದ್ದರೆ ಬದುಕುವುದೇ ಕಷ್ಟ. ಆದರೆ ಗರ್ಭಿಣಿಯರು ಹೆಚ್ಚು ಫ್ಯಾನ್ ಬಳಸಿದರೆ ದೇಹದಲ್ಲಿರುವ ನೀರಿನ ಅಂಶ ಒಣಗಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮತ್ತೆ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss