ಉದ್ಯೋಗಿಗಳಿಂದ ಕೆಲಸ ಮಾಡಿಸಿಕೊಳ್ಳಲು ಗೂಗಲ್‌ ಏನು ಮಾಡುತ್ತಿದೆ ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೆಲವು ದಿನಗಳ ಹಿಂದೆಯಷ್ಟೇ ಗೂಗಲ್ ಸಿಇಒ ಸುಂದರ್ ಪಿಚೈ ಕಂಪನಿಯು ಹಲವಾರು ಉದ್ಯೋಗಿಗಳನ್ನು ಹೊಂದಿದೆ ಆದರೆ ಕಡಿಮೆ ಕೆಲಸ ಮಾಡುತ್ತದೆ ಎಂದು ಹೇಳಿದ್ದರು. ಪರಿಣಾಮಕಾರಿಯಾಗಿ ಕೆಲಸ ಮಾಡಲು ಮತ್ತು ತಮ್ಮ ಉತ್ಪನ್ನಗಳನ್ನು ಸುಧಾರಿಸಲು ಮತ್ತು ಗ್ರಾಹಕರಿಗೆ ಸಹಾಯ ಮಾಡಲು ಹೇಗೆ ಹೆಚ್ಚು ಕೆಲಸ ಮಾಡಬೇಕು ಎಂಬುದರ ಕುರಿತು ತಮ್ಮ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚಿನ ಕೆಲ ವರದಿಗಳು ಗೂಗಲ್‌ ತನ್ನ ಉದ್ಯೋಗಿಗಳ ಬಳಿ ಹೆಚ್ಚು ಕೆಲಸ ಮಾಡಿಸಿಕೊಳ್ಳಲು ಬೆದರಿಕೆ ತಂತ್ರಗಳನ್ನು ಉಪಯೋಗಿಸುತ್ತಿರುವುದು ಬೆಳಕಿಗೆ ಬಂದಿದೆ.

ವರದಿಯ ಪ್ರಕಾರ, ಕೆಲವು ಉನ್ನತ Google ಕಾರ್ಯನಿರ್ವಾಹಕರು ತಮ್ಮ ಉದ್ಯೋಗಿಗಳಿಗೆ ಫಲಿತಾಂಶಗಳನ್ನು ನೀಡಿ ಇಲ್ಲವೇ ಹೊರಹೋಗಲು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಕಾರ್ಯಕ್ಷಮತೆಯನ್ನು ಹೆಚ್ಚಿಸದಿದ್ದರೆ ಅವರು ವಜಾಗೊಳಿಸುವಿಕೆಗೆ ಸಿದ್ಧರಾಗಬೇಕು ಎಂದು ವ್ಯವಸ್ಥಾಪಕರು ಹೇಳಿದ್ದಾರೆ. ಮುಂದಿನ ತ್ರೈಮಾಸಿಕ ಗಳಿಕೆಯ ಆಧಾರದ ಮೇಲೆ ವಜಾಗೊಳಿಸುವಿಕೆಯು ನಿರ್ಧರಿತವಾಗುತ್ತದೆ ಎನ್ನಲಾಗಿದೆ.

ಗೂಗಲ್‌ ನಲ್ಲಿ ಇತ್ತೀಚಿನ ಆಂತರಿಕ ವಿಷಯಗಳು ಚೆನ್ನಾಗಿದ್ದಂತೆ ತೋರುತ್ತಿಲ್ಲ. ಒಂದು ತಿಂಗಳ ಹಿಂದಷ್ಟೇ ಆರ್ಥಿಕ ಹಿಂಜರಿತದ ಕಾರಣದಿಂದಾಗಿ ಗೂಗಲ್‌ ತನ್ನ ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿದಿತ್ತು. ಪ್ರಸ್ತುತ ವಜಾಗೊಳಿಸುವ ಕುರಿತು ಗೂಗಲ್‌ ಅಧಿಕೃತವಾಗಿ ಏನೂ ಹೇಳಿಕೆ ನೀಡಿಲ್ಲವಾದರೂ ಅಲ್ಲಿನ ಉದ್ಯೋಗಿಗಳಲ್ಲಿ ಇದು ಅಳುಕು ಮೂಡಿಸಿದೆ. ಏಕೆಂದರೆ ಆರ್ಥಿಕ ಹಿಂಜರಿತವನ್ನು ತಡೆಯಲು ಟೆಕ್‌ ದೈತ್ಯ ಕಂಪನಿಗಳಾದ ನೆಟ್‌ಫ್ಲಿಕ್ಸ್, ಮೈಕ್ರೋಸಾಫ್ಟ್‌ನಂತಹ ಹಲವಾರು ಇತರ ಬಿಗ್ ಟೆಕ್‌ಗಳು ಆರ್ಥಿಕ ಕುಸಿತ ತಡೆಯಲು ವಜಾಗೊಳಿಸುವಿಕೆಯನ್ನು ಕೈಗೊಂಡಿದ್ದವು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!