ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಬಾಲಿವುಡ್ ನಟ ಶಾರುಖ್ ಖಾನ್ ಐಷಾರಾಮಿ ಜೀವನದ ಬಗ್ಗೆ ಪ್ರತಿಯೊಬ್ಬರಿಗೂ ಕ್ಯೂರಿಯಾಸಿಟಿ ಇದ್ದೆ ಇದೆ. ಇದೀಗ ಅವರ ‘ವ್ಯಾನಿಟಿ ವ್ಯಾನ್’ ಬಗ್ಗೆ ಒಂದಿಷ್ಟು ಮಾಹಿತಿ ಬಹಿರಂಗವಾಗಿದೆ.
ಬಾಲಿವುಡ್ ಕಿಂಗ್ ಬಳಿ ಇರುವ ಕಾರಿನ ವಿಷಯಕ್ಕೆ ಬಂದರೆ ಬಹುಶಃ ಮತ್ಯಾವ ಬಾಲಿವುಡ್ ನಟನ ಬಳಿಯೂ ಇಷ್ಟು ಕಾರುಗಳಿಲ್ಲ. ಇನ್ನು ರೋಲ್ಸ್ ರಾಯ್ಸ್ ಫ್ಯಾಂಟಮ್, ಬುಗಾಟಿ ವೇಯ್ರಾನ್, ಆಡಿ ಎ6, ವೊಲ್ವೊ ಬಿಆರ್9 ಶಾರುಖ್ನ ಖಾಸಗಿ ಗ್ಯಾರೇಜ್ನಲ್ಲಿವೆ.
ಇನ್ನು ಶೂಟಿಂಗ್ಗಾಗಿ ತೆರಳುವಾಗ ಶಾರುಖ್ ಖಾನ್ ವಿರಾಮಕ್ಕಾಗಿ ಬಳಸುವ ‘ವ್ಯಾನಿಟಿ ವ್ಯಾನ್’ ಬಗ್ಗೆ ಹೇಳುವುದಾದರೆ ಇದೊಂದು ಐಷಾರಾಮಿ ಬಂಗಲೆಯಂತಿದೆ. ಇದನ್ನು ವಿನ್ಯಾಸಗೊಳಿಸಿದವನು ಖ್ಯಾತ ವಿನ್ಯಾಸಕ ದಿಲೀಪ್ ಛಾಬ್ರಿಯಾ. ಈ ಬಸ್ ನ ನೆಲವನ್ನು ಪೂರ್ತಿ ಗ್ಲಾಸ್ ನಿಂದಲೇ ಮಾಡಲಾಗಿದೆ.
ಐಪ್ಯಾಡ್ನಿಂದಲೇ ಅಲ್ಲಿರುವ ಎಲ್ಲ ಸಾಧನಗಳನ್ನು ನಿಯಂತ್ರಿಸಬಹುದಾಗಿದೆ. ಆರಾಮವಾಗಿ ಬೇಕಾದಂತೆ ಕುಳಿತುಕೊಳ್ಳುವ ಚೇರ್ ಇದೆ. ಹೈಫೈ ವಾಶ್ ರೂಮ್ ಇದೆ. ‘1 ಬಿಎಚ್ಕೆ ಫ್ಲ್ಯಾಟ್ ‘ ನಷ್ಟು ಜಾಗ ಈ ಬಸ್ ನಲ್ಲಿದೆ.