spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರೀತಿಯ ಶ್ವಾನಕ್ಕೆ ಬಳೆ ತೊಡಿಸಿ ಸೀಮಂತ ಮಾಡಿದ ಕುಟುಂಬ!

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೆಲವರು ನಾಯಿ ಎಂದರೆ ಸಾಕು ಪ್ರಾಣಿ ಎಂದುಕೊಳ್ಳುವುದಕ್ಕಿಂತ ಅದನ್ನು ತಮ್ಮ ಮನೆಯ ಸದಸ್ಯ ಎಂದುಕೊಳ್ಳುತ್ತಾರೆ. ಹೀಗೆ ಶ್ವಾನವನ್ನು ಮನೆಯವರಂತೆ ಕಾಣುತ್ತಿದ್ದ ತಮಿಳು ನಾಡಿನ ಕುಟುಂಬವೊಂದರ ಸುದ್ದಿ ಇದೀಗಾ ಭಾರೀ ವೈರಲ್ ಆಗುತ್ತಿದೆ.

ಹೌದು.. ತಮಿಳುನಾಡಿನ ತೇನಿ ಜಿಲ್ಲೆಯ ಉಪ್ಪುಕೋಟೈ ನಿವಾಸಿಯಾಗಿರುವ ಕುಮಾರೇಶನ್ ಕುಟುಂಬದವರು ತಮ್ಮ ಪ್ರೀತಿಯ ಶ್ವಾನಕ್ಕೆ ಸೀಮಂತ ಕಾರ್ಯ ನೆರವೇರಿಸಿದ್ದಾರೆ. ಶ್ವಾನದ ಸೀಮಂತ ಕಾರ್ಯಕ್ರಮ ಫೋಟೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಈ ಶ್ವಾನದ ಹೆಸರು ರೇಷ್ಮೆ. ರೇಷ್ಮೆಯನ್ನು ಮೂರು ವರ್ಷದ ಹಿಂದೆ ಮನೆಗೆ ಕರೆತರಲಾಗಿತ್ತು. ಇದೀಗ ರೇಷ್ಮೆ ಗರ್ಭಿಣಿಯಾಗಿದ್ದು, ಕುಟುಂಬದವರು  ಸೀಮಂತ ಕಾರ್ಯ ನಡೆಸಲು ನಿರ್ಧರಿಸಿದರು. ಸಂಬಂಧಿಗಳನ್ನೆಲ್ಲ ಸೀಮಂತ ಕಾರ್ಯಕ್ರಮಕ್ಕೆ ಕರೆದು ಅದ್ಧೂರಿಯಾಗಿ ಆಚರಿಸಿದ್ದಾರೆ.

ರೇಷ್ಮೆಗೆ ಹೊಸ ಬಟ್ಟೆಯನ್ನುಉಡಿಸಿ, ಐದು ಬಗೆಯ ಅಕ್ಕಿಯನ್ನುತಿನ್ನಿಸಿ ಹಾಗೂ ಬಳೆಯನ್ನು ತೊಡಿಸಿ ಭರ್ಜರಿಯಾಗಿ ಸೀಮಂತ ಕಾರ್ಯಕ್ರಮ  ನೆರವೇರಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss