ಮನಮೋಹನ್‌ ಸಿಂಗ್‌ ಅವರ ಈ ಆಸೆ ಈಡೇರಲೇ ಇಲ್ಲ, ಯಾವುದು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರು ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಇಂದು ಶಾಲಾ, ಕಾಲೇಜುಗಳು, ಬ್ಯಾಂಕ್‌ ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ನೀಡಲಾಗಿದೆ. ಏಳು ದಿನಗಳ ಶೋಕಾಚರಣೆ ಘೋಷಣೆ ಮಾಡಲಾಗಿದೆ. 

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸೆಪ್ಟೆಂಬರ್ 26, 1932ರಲ್ಲಿ ಜನಿಸಿದ ಮನಮೋಹನ್ ಸಿಂಗ್ ಅವರ ಕುಟುಂಬ ವಿಭಜನೆಯ ಬಳಿಕ ಭಾರತಕ್ಕೆ ಬಂದಿತು. ಆದರೆ ತಾವು ಬೆಳೆದ ಸ್ಥಳವನ್ನು ಅವರಿಗೆ ಎಂದೂ ಮರೆಯಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಅವರು ತಮ್ಮ ಸಂದರ್ಶನವೊಂದರಲ್ಲಿ ಮನಮೋಹನ್ ಸಿಂಗ್​ ಅವರ ಕನಸಿನ ಬಗ್ಗೆ ಪ್ರಸ್ತಾಪಿಸಿದ್ದರು.

ಸಂದರ್ಶನವೊಂದರಲ್ಲಿ ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಅವರು ಮನಮೋಹನ್ ಸಿಂಗ್ ಅವರ ಆಸೆಯನ್ನು ಬಹಿರಂಗಪಡಿಸಿದ್ದರು. ಮನಮೋಹನ್ ಸಿಂಗ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ತಮ್ಮ ಪಾಕಿಸ್ತಾನಿ ಸ್ನೇಹಿತರೊಂದಿಗೆ ರಾವಲ್ಪಿಂಡಿಗೆ ಹೋಗಿದ್ದರು. ಆ ಪ್ರವಾಸದ ಸಮಯದಲ್ಲಿ ಅವರು ಬೈಸಾಖಿಯ ದಿನದಂದು ಗುರುದ್ವಾರಕ್ಕೆ ಹೋಗಿದ್ದರು, ಆದರೆ ತಮ್ಮ ಹಳ್ಳಿಗೆ ಹೋಗಲು ಸಾಧ್ಯವಾಗಲಿಲ್ಲ. ತಾವು ಹುಟ್ಟಿ ಬೆಳೆದ ಹಳ್ಳಿಯನ್ನು ಒಮ್ಮೆ ನೋಡಬೇಕು ಎಂದು ಆಸೆಪಟ್ಟಿದ್ದರಂತೆ.

ಮನಮೋಹನ್ ಸಿಂಗ್ ತಾಯಿ ತೀರಿಕೊಂಡಾಗ ಅವರಿನ್ನೂ ತುಂಬಾ ಚಿಕ್ಕವರು. ಅರ ಅಜ್ಜನ ಜತೆಯಲ್ಲಿ ಬೆಳೆದಿದ್ದರು, ಯಾವುದೋ ಒಂದು ಗಲಭೆಯಲ್ಲಿ ಅಜ್ಜನನ್ನು ಕೂಡ ಕಳೆದುಕೊಂಡರು. ಈ ಘಟನೆ ಅವರ ಮನಸ್ಸಿನಲ್ಲಿ ಆಳವಾದ ಪರಿಣಾಮ ಬೀರಿತ್ತು.

ಈ ಘಟನೆ ಬಳಿಕ ಅವರು ಪೇಶಾವರದಲ್ಲಿರುವ ತನ್ನ ತಂದೆಯ ಬಳಿಗೆ ಮರಳಿದರು. ಭಾರತದ ವಿಭಜನೆಯ ಸಮಯದಲ್ಲಿ ಅವರು ಹೈಸ್ಕೂಲ್​ನಲ್ಲಿದ್ದಾಗ ಪಾಕಿಸ್ತಾನವನ್ನು ತೊರೆದು ತನ್ನ ತಂದೆಯೊಂದಿಗೆ ಭಾರತಕ್ಕೆ ಬರಬೇಕಾಯಿತು. ರಾಜೀವ್ ಶುಕ್ಲಾ ಪ್ರಕಾರ, ಸಿಂಗ್ ಭಾರತದ ಪ್ರಧಾನಿಯಾಗಿದ್ದಾಗ ಒಮ್ಮೆ ಪಾಕಿಸ್ತಾನಕ್ಕೆ ಹೋಗಬೇಕೆಂದು ಬಯಸಿದ್ದರು. ತಾನು ಬೆಳೆದ ಹಳ್ಳಿಯನ್ನು ನೋಡಬೇಕೆಂಬ ಆಸೆ ಇತ್ತು. ಅವರು ಪ್ರಾಥಮಿಕ ಶಿಕ್ಷಣ ಪಡೆದ ಶಾಲೆಯನ್ನು ನೋಡಲು ಬಯಸಿದ್ದರು.

ಒಮ್ಮೆ ನಾನು ಅವರ ಜತೆ ಪಿಎಂ ಹೌಸ್​ನಲ್ಲಿ ಕುಳಿತಿದ್ದೆ. ಹೀಗೆ ಮಾತನಾಡುತ್ತಿದ್ದಾಗ ಅವರು ತಮಗೆ ಪಾಕಿಸ್ತಾನಕ್ಕೆ ಹೋಗುವ ಆಸೆ ಇದೆ ಎಂದಿದ್ದರು. ನಾನು ಎಲ್ಲಿ ಎಂದು ಕೇಳಿದಾಗ ತಮ್ಮ ಹಳ್ಳಿಗೆ ಹೋಗಬೇಕು ಎಂದು ಹೇಳಿದ್ದಾಗಿ ರಾಜೀವ್ ಶುಕ್ಲಾ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದ ಶಾಲೆಯನ್ನು ನೋಡುವ ಅವಕಾಶ ಅವರಿಗೆ ಎಂದಿಗೂ ಇರಲಿಲ್ಲ, ಆದರೆ ಅವರು ಪಾಕಿಸ್ತಾನದ ಗಾಹ್ ಗ್ರಾಮದಲ್ಲಿ ಕಲಿತ ಶಾಲೆಯನ್ನು ಈಗ ಮನಮೋಹನ್ ಸಿಂಗ್ ಸರ್ಕಾರಿ ಬಾಲಕರ ಶಾಲೆ ಎಂದು ಕರೆಯಲಾಗುತ್ತಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!