Monday, July 4, 2022

Latest Posts

ಲುಧಿಯಾನ್ ಸ್ಫೋಟ- ಪಂಜಾಬಿನಲ್ಲಿ ಪಾಕಿಸ್ತಾನ ಶುರು ಮಾಡಿರುವ ಆಟ ಎಂಥಾದ್ದು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ನ ಲೂಧಿಯಾನ ಕೋರ್ಟ್ ಸಂಕೀರ್ಣದಲ್ಲಿ ನಡೆದ ಬಾಂಬ್ ಸ್ಫೋಟದ ಹಿಂದೆ ಪಾಕ್ ಉಗ್ರರ ಕೈವಾಡವಿದೆ ಎಂದು ಗುಪ್ತಚರ ಸಂಸ್ಥೆಗಳು ಸಂಶಯ ವ್ಯಕ್ತಪಡಿಸಿವೆ. ಸ್ಫೋಟದ ಹಿಂದೆ ಪಾಕಿಸ್ತಾನಿ ಮೂಲದ ಐಎಸ್‌ಐ ಬೆಂಬಲಿತ ಖಲಿಸ್ತಾನ್ ಗುಂಪಿನ ಕೈವಾಡ ಇದೆ.

ಕೆಂಪು ಕೋಟೆಯ ಘಟನೆ ನಂತರ, ಗುಪ್ತಚರ ಸಂಸ್ಥೆಗಳು ಪಂಜಾಬ್‌ನಲ್ಲಿ ತಮ್ಮ ಚಲನವಲನವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿರುವ ಖಲಿಸ್ತಾನ್ ಪಡೆಗಳ ಮೇಲೆ ನಿಕಟ ನಿಗಾ ಇರಿಸಿವೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದಲ್ಲಿ ನೆಲೆಸಿರುವ ಹ್ಯಾಂಡ್ಲರ್‌ಗಳು ಪಂಜಾಬ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ಸ್ಥಳೀಯವಾಗಿ ಸಕ್ರಿಯವಾಗಿರುವ ತಮ್ಮ ಸದಸ್ಯರಿಗೆ
ಸೂಚನೆಗಳನ್ನು ನೀಡುತ್ತಿದ್ದರು. ಇಂತಹ ಹಲವು ಪ್ರಯತ್ನಗಳನ್ನು ಪೊಲೀಸರು ವಿಫಲಗೊಳಿಸಿದ್ದಾರೆ ಎಂದಿದ್ದಾರೆ.

ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಖಲಿಸ್ತಾನ್ ಚಳವಳಿಯನ್ನು ಪುನರುಜ್ಜೀವನಗೊಳಿಸಲು ಸ್ಥಳೀಯ ಗ್ಯಾಂಗ್‌ಗಳನ್ನು ನೇಮಿಸಿಕೊಳ್ಳಲಾಗಿದೆ. ಮತ್ತು ಇವರ ಮೂಲಕ ತಮ್ಮ ಯೋಜನೆಗಳನ್ನು ಸಾಕಾರಗೊಳಿಸುತ್ತಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ದೊರಕಿದೆ ಎಂದು ಹೇಳಿದ್ದಾರೆ.

ಈ ಮಾಹಿತಿಯನ್ನು ಕಲೆಹಾಕಿ ಸ್ಥಳೀಯ ಪೊಲೀಸರೊಂದಿಗೆ ಹಂಚಿಕೊಂಡಿದ್ದೇವೆ. ಜಾಮೀನಿನ ಮೇಲೆ ಅಥವಾ ತಲೆಮರೆಸಿಕೊಂಡ ಅಪರಾಧಿಗಳ ಪಟ್ಟಿಯನ್ನು ಸಿದ್ಧಪಡಿಸಿ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

ನವೆಂಬರ್‌ನಲ್ಲಿ ಪಠಾಣ್‌ಕೋಟ್‌ನ ಸೇನಾ ಕಂಟೋನ್ಮೆಂಟ್ ಗೇಟ್ ಬಳಿ ನಡೆದ ಗ್ರೆನೇಡ್ ಸ್ಫೋಟವು ಸ್ಥಳೀಯ ಅಪರಾಧಿಗಳು ನಡೆಸಿದ ಭಯೋತ್ಪಾದಕ ಚಟುವಟಿಕೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ವರ್ಷ ಪಂಜಾಬ್ ಬಳಿ ಮಾನವರಹಿತ ಸುಮಾರು 42 ಡ್ರೋನ್‌ಗಳು ಪತ್ತೆಯಾಗಿವೆ. ಪತ್ತೆಯಾಗದ ಇನ್ನೂ ಹಲವು ಡ್ರೋನ್‌ಗಳ ಹಾರಾಟ ಸಾರ್ವಜನಿಕರ ಗಮನಕ್ಕೂ ಬಂದಿದೆ. ಈ ಡ್ರೋನ್‌ಗಳೆಲ್ಲ ಪಾಕಿಸ್ತಾನ ಕಡೆಯಿಂದ ಬಂದಿವೆ. ಡ್ರೋನ್ ಬಳಸಿ ಸ್ಫೋಟಕಗಳು ಮತ್ತು ಸಣ್ಣ ಶಸ್ತ್ರಾಸ್ತಗಳನ್ನು ಕಳುಹಿಸಲಾಗಿದೆ. ರಾಜ್ಯದಲ್ಲಿ ಶಾಂತಿಯನ್ನು ಅಸ್ಥಿರಗೊಳಿಸಲು ಈ ಪ್ರಯತ್ನಗಳು ನಡೆದಿವೆ.

ಕಳೆದ ಐದು ತಿಂಗಳಲ್ಲಿ ಪಂಜಾಬ್ ಪೊಲೀಸರು ಗಡಿಭಾಗದ ಪಟ್ಟಣಗಳಿಂದ ಏಳು ಟಿಫಿನ್ ಬಾಂಬ್‌ಗಳು ಮತ್ತು 10 ಕ್ಕೂ ಹೆಚ್ಚು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss