spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಊಟಕ್ಕೆ ಸಾಂಬಾರ್ ಸರಿಯಾಗಿ ಮಾಡಿಲ್ಲ ಅಂತ ಈ ವ್ಯಕ್ತಿ ಮಾಡಿದ್ದೇನು ಗೊತ್ತಾ?

- Advertisement -Nitte

ಹೊಸದಿಗಂತ ವರದಿ, ಸಿದ್ಧಾಪುರ:

ಊಟಕ್ಕೆ ಸಾಂಬಾರು ಸರಿಯಾಗಿಲ್ಲ ಎಂದು ಜಗಳ ಮಾಡಿ ವ್ಯಕ್ತಿಯೋರ್ವ ತನ್ನ ತಾಯಿ ಮತ್ತು ತಂಗಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ತಾಲೂಕಿನ ದೊಡ್ಮನೆ ಗ್ರಾಮದ ಕುಡಗೋಡದಲ್ಲಿ ಸಂಭವಿಸಿದೆ.
ಪಾರ್ವತಿ ನಾರಾಯಣ ಹಸ್ಲರ್(42) ಮತ್ತು ರಮ್ಯಾ ನಾರಾಯಣ ಹಸ್ಲರ್ (19) ಮೃತ ದುರ್ದೈವಿಗಳಾಗಿದ್ದು
ಮಂಜುನಾಥ ಹಸ್ಲರ್ (42) ಎಂಬಾತನೇ ತನ್ನ ಹೆತ್ತ ತಾಯಿ ಮತ್ತು ಒಡ ಹುಟ್ಟಿದ ಸಹೋದರಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಕುಡಿತದ ಚಟ ಹೊಂದಿರುವ ಮಂಜುನಾಥ ಬುಧವಾರ ರಾತ್ರಿ ಮನೆಗೆ ಬಂದು ಊಟಕ್ಕೆ ಸಾಂಬಾರು ಸರಿ ಇಲ್ಲ ಎಂದು ಜಗಳ ತೆಗೆದು ನಾಡ ಬಂದೂಕಿನಿಂದ ತಾಯಿ ಮತ್ತು ತಂಗಿಗೆ ಗುಂಡು ಹಾರಿಸಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಆರೋಪಿತನ ತಂದೆ ಸಿದ್ಧಾಪುರ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss