ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಸ್‌ಪೋರ್ಟ್ ನಾವು ವಿದೇಶಗಳಿಗೆ ಓಡಾಡೋಕೆ ಬೇಕಾದ ಅತ್ಯಮೂಲ್ಯವಾದ ಡಾಕ್ಯೂಮೆಂಟ್. ಈ ಪಾಸ್‌ಪೋರ್ಟ್ ನಿಂದ ಒಂದು ದೇಶದ ನಾಗರಿಕರು ಎಷ್ಟು ದೇಶಗಳಿಗೆ ವೀಸಾ ಇಲ್ಲದೆ ಅಥವಾ ಆಗಮನದಲ್ಲಿ ವೀಸಾ ಪಡೆದು ಹೋಗಬಹುದು ಎಂಬುದರಿಂದ ಅಳೆಯಲಾಗುತ್ತದೆ.
ಈ ಕುರಿತು ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ವರದಿಯೊಂದನ್ನು ಬಹಿರಂಗ ಪಡಿಸಿದ್ದು, 2025ರ ಈ ವರದಿಯಲ್ಲಿ ವಿಶ್ವದ 10 ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿಯಿದೆ.
ಈ ಪಟ್ಟಿಯ ಮೊದಲನೇ ಸ್ಥಾನದಲ್ಲಿ ಸಿಂಗಾಪುರದ ಪಾಸ್‌ಪೋರ್ಟ್ ಇದೆ. ಇದು ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಆಗಿದೆ. ಇದರಿಂದ 195 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು.
ಎರಡನೇ ಸ್ಥಾನ: ಜಪಾನ್
ಜಪಾನ್ ಎರಡನೇ ಸ್ಥಾನದಲ್ಲಿದೆ. ಜಪಾನ್‌ನ ಪಾಸ್‌ಪೋರ್ಟ್‌ನಿಂದ 193 ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು.
ಮೂರನೇ ಸ್ಥಾನ: ಫಿನ್‌ಲ್ಯಾಂಡ್
ಫಿನ್‌ಲ್ಯಾಂಡ್ ಮೂರನೇ ಸ್ಥಾನದಲ್ಲಿದೆ. ಇದರಿಂದ 192 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು.
ನಾಲ್ಕನೇ ಸ್ಥಾನದಲ್ಲಿ ಆರು ದೇಶಗಳಿವೆ: ಫ್ರಾನ್ಸ್, ಜರ್ಮನಿ, ಇಟಲಿ, ದಕ್ಷಿಣ ಕೊರಿಯಾ, ಸ್ಪೇನ್, ಮತ್ತು ಆಸ್ಟ್ರಿಯಾ. ಈ ದೇಶಗಳಿಂದ 191 ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು. ಐದನೇ ಸ್ಥಾನದಲ್ಲಿ ಏಳು ದೇಶಗಳಿವೆ: ಡೆನ್ಮಾರ್ಕ್, ಐರ್ಲೆಂಡ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ನಾರ್ವೆ, ಸ್ವೀಡನ್, ಮತ್ತು ಬೆಲ್ಜಿಯಂ. ಇವು 190 ದೇಶಗಳಿಗೆ ವೀಸಾ ಇಲ್ಲದೆ ಪ್ರವೇಶ ಕೊಡುತ್ತವೆ.
ಆರನೇ ಸ್ಥಾನದಲ್ಲಿ ನ್ಯೂಜಿಲೆಂಡ್, ಪೋರ್ಚುಗಲ್, ಸ್ವಿಟ್ಜರ್ಲೆಂಡ್, ಯುನೈಟೆಡ್ ಕಿಂಗ್‌ಡಮ್, ಮತ್ತು ಆಸ್ಟ್ರೇಲಿಯಾ 189 ದೇಶಗಳಿಗೆ ಪ್ರವೇಶ ಕೊಡುತ್ತವೆ. ಏಳನೇ ಸ್ಥಾನದಲ್ಲಿ ಗ್ರೀಸ್ ಮತ್ತು ಕೆನಡಾ 188 ದೇಶಗಳಿಗೆ, ಎಂಟನೇ ಸ್ಥಾನದಲ್ಲಿ ಮಾಲ್ಟಾ, ಪೋಲೆಂಡ್, ಜೆಕಿಯಾ 187 ದೇಶಗಳಿಗೆ, ಒಂಬತ್ತನೇ ಸ್ಥಾನದಲ್ಲಿ ಹಂಗೇರಿ, ಎಸ್ಟೋನಿಯಾ 186 ದೇಶಗಳಿಗೆ, ಮತ್ತು ಹತ್ತನೇ ಸ್ಥಾನದಲ್ಲಿ ಯುನೈಟೆಡ್ ಸ್ಟೇಟ್ಸ್, ಲಾಟ್ವಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಲಿಥುವೇನಿಯಾ 185 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು.
ಭಾರತದ ಪಾಸ್‌ಪೋರ್ಟ್ 2025ರಲ್ಲಿ 85ನೇ ಸ್ಥಾನದಲ್ಲಿದೆ. 2024ರಲ್ಲಿ ಇದು 80ನೇ ಸ್ಥಾನದಲ್ಲಿತ್ತು. ಈಗ ಭಾರತೀಯ ಪಾಸ್‌ಪೋರ್ಟ್‌ನಿಂದ 57 ದೇಶಗಳಿಗೆ ವೀಸಾ ಇಲ್ಲದೆ ಅಥವಾ ಆಗಮನದಲ್ಲಿ ವೀಸಾ ಪಡೆದು ಹೋಗಬಹುದು.